ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

'ಭಾರತವನ್ನು ಸೋಲಿಸುತ್ತೇವೆ'

Srinivasa Murthy VN
Updated On : 18 Feb 2013, 11:15 am

ನವದೆಹಲಿ: ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆತಿಥೇಯ ಭಾರತ ತಂಡ ಒತ್ತಡಕ್ಕೆ ಸಿಲುಕಿದ್ದು, ಆಸ್ಟ್ರೇಲಿಯಾ ತಂಡ ಭಾರತ ತಂಡವನ್ನು ಮಣಿಸಲಿದೆ ಎಂದು ವಾರ್ನರ್ ತಿಳಿಸಿದ್ದಾರೆ. ನಮ್ಮ ತಂಡದಲ್ಲಿ ಭಾರತ ತಂಡವನ್ನು ಸೋಲಿಸಲು ಬೇಕಾಗಿರುವ ಸಾಮರ್ಥ್ಯವಿದೆ. ಇತ್ತೀಚಿನ ದಿನಗಳಲ್ಲಿ ಭಾರತ ತಂಡದ ಫಲಿತಾಂಶದಿಂದ ಮಹೇಂದ್ರ ಸಿಂಗ್ ಧೋನಿ ಒತ್ತಡದಲ್ಲಿದ್ದಾರೆ. ನಮ್ಮ ತಂಡದಲ್ಲಿನ ವೇಗದ ಬೌಲರ್‌ಗಳು ಹಾಗೂ ಬ್ಯಾಟ್ಸ್‌ಮನ್‌ಗಳು ಭಾರತ ತಂಡಕ್ಕಿಂತ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ವಾರ್ನರ್ ತಿಳಿಸಿದ್ದಾರೆ.

ಬಿಸಿಸಿಐಗೆ ಐಸಿಸಿ ಅಭಿನಂದನೆ
ಮುಂಬೈ:
ಮಹಿಳಾ ವಿಶ್ವಕಪ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿದ ಹಿನ್ನಲೆಯಲ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಬಿಸಿಸಿಐಗೆ ಅಭಿನಂದನೆ ತಿಳಿಸಿದೆ. ಪಂದ್ಯವಳಿಯನ್ನು ಯಶಸ್ವಿಯಾಗಿ ಆಯೋಜಿಸಿದ ಬಿಸಿಸಿಐಗೆ ಹಾಗೂ ಪಂದ್ಯವಳಿಯಲ್ಲಿ ಮಹಿಳಾ ಕ್ರಿಕೆಟರ್‌ಗಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಸಹಾಯ ಮಾಡಿದ ಆಯೋಜಕರಿಗೆ, ಪ್ರಾಯೋಜಕರಿಗೆ ಐಸಿಸಿ ಅಧ್ಯಕ್ಷ ಆಲನ್ ಐಸಾಕ್ ಅಭಿನಂದನೆ ಸಲ್ಲಿಸಿದ್ದಾರೆ. ಈ ಪಂದ್ಯವಳಿಯನ್ನು ಆಯೋಜಿಸಿದ್ದ ರೀತಿ ಹಾಗೂ ಸೌಲಭ್ಯಗಳ ಗುಣಮಟ್ಟವನ್ನು ಎಲ್ಲಾ ಕ್ರಿಕೆಟರ್‌ಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಬಿಸಿಸಿಐ, ಮಹರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್, ಒಡಿಶಾ ಕ್ರಿಕೆಟ್ ಅಸೋಸಿಯೇಷನ್‌ಗೆ ಹೃದಯ ಪೂರ್ವಕ ಧನ್ಯವಾದಗಳು ಎಂದು ಐಸಾಕ್ ತಿಳಿಸಿದ್ದಾರೆ.

ಮೆರಥಾನ್‌ಗೆ ಲಿಂಕೋಯಿ, ಬಬ್ಬರ್
ನವದೆಹಲಿ:
ಮುಂಬೈ ಮೆರಥಾನ್ ವಿಜೇತ ಬಿನ್ನಿಂಗ್ ಲಿಂಕೋಯಿ ಮತ್ತು ಲಲಿತಾ ಬಬ್ಬರ್ ಅವರು ಚೀನಾದಲ್ಲಿ ನಡೆಯಲಿರುವ 14ನೇ ಏಷ್ಯನ್ ಮೆರಥಾನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಫೆಬ್ರುವರಿ 24ರಂದು ನಡೆಯಲಿರುವ ಮೆರಥಾನ್‌ನಲ್ಲಿ ಲಿಂಕೋಯಿ ಪುರುಷರ ವಿಭಾಗದಲ್ಲಿ ಮತ್ತು ಬಬ್ಬರ್ ಮಹಿಳೆಯರ ವಿಭಾಗದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಲಿದ್ದಾರೆ.
ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಲಿಂಕೋಯಿ ಮತ್ತು ಬಬ್ಬರ್ ಅವರು ಕಳೆದ ತಿಂಗಳು ಮುಂಬೈಯಲ್ಲಿ ನಡೆದ ಮೆರಥಾನ್‌ನಲ್ಲಿ ಭಾರತದ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.
21 ರಾಷ್ಟ್ರಗಳಿಂದ ಒಟ್ಟು 41 ಅಗ್ರ ಏಷ್ಯಾ ಮೆರಥಾನ್‌ಪಟುಗಳು ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲಿದ್ದಾರೆ.
ಅಥ್ಲೀಟ್‌ಗಳು ಪ್ರತಿನಿಧಿಸುವ ದೇಶಗಳ ಫೆಡರೇಷನ್‌ಗಳು ನಾಮನಿರ್ದೇಶನ ಮಾಡುವವರನ್ನು ಮಾತ್ರ ವಿಜೇತರು ಎಂದು ಘೋಷಿಸಲಾಗುವುದು.
ಏಷ್ಯಾದ ಇತರ ರಾಷ್ಟ್ರಗಳ ಅಥ್ಲೀಟ್‌ಗಳು ಸಹ ಚಾಂಪಿಯನ್‌ಷಿಪ್‌ನಲ್ಲಿ ವೈಯಕ್ತಿಕವಾಗಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಆದರೆ, ಫಲಿತಾಂಶ ಪ್ರಕಟಿಸುವಾಗ ಅವರನ್ನು ಪರಿಗಣಿಸದಿರಲು ನಿರ್ಧರಿಸಲಾಗಿದೆ.

ಭಾರತ ತಂಡ ದುರ್ಬಲವಾಗಿದೆ
ಮೆಲ್ಬರ್ನ್:
ಭಾರತ ಹಾಗೂ ಆಸ್ಟ್ರೇಲಿಯಾ ಸರಣಿ ಹತ್ತಿರವಾಗುತ್ತಿದ್ದಂತೆ ಸರಣಿಯಲ್ಲಿ ತಂಡಗಳ ಬಲಾಬಲದ ಬಗ್ಗೆ ಹಲವಾರು ಮಾಜಿ ಕ್ರಿಕೆಟರ್‌ಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಈ ಸರಣಿಯಲ್ಲಿ ಭಾರತ ತಂಡ ದುರ್ಬಲವಾಗಿ ಕಾಣುತ್ತಿದೆ ಎಂದು ಆಸ್ಟ್ರೇಲಿಯಾದ ಮಾಜಿ ಆಟಹಗಾರ ಜೆಫ್ ಲಾಸನ್ ಅಭಿಪ್ರಾಯಪಟ್ಟಿದ್ದಾರೆ. ಬ್ಯಾಟಿಂಗ್ ದಿಗ್ಗಜರೆಂಬ ಖ್ಯಾತಿಗಳಿಸಿದ್ದ ಕೆಲ ಪ್ರಮುಖ ಬ್ಯಾಟ್ಸ್‌ಮನ್‌ಗಳ ನಿವೃತ್ತಿ ಹಾಗೂ ತವರಿನಲ್ಲಿ ಸ್ಪಿನ್ನರ್‌ಗಳ ಸಹಾಯದಿಂದ ಇಂಗ್ಲೆಂಡ್ ತಂಡವನ್ನು ಕಟ್ಟಿಹಾಕುವಲ್ಲಿ ವಿಫಲವಾಗಿರುವ ಭಾರತ ತಂಡ ಈ ಸರಣಿಯಲ್ಲಿ ದುರ್ಬಲವಾಗಿ ಕಾಣುತ್ತಿದೆ ಎಂದು ಲಾಸನ್ ತಿಳಿಸಿದ್ದಾರೆ. ಇತ್ತೀಚೆಗೆ ಭಾರತ ತಂಡ ಸ್ಪಿನ್ ಪಿಚ್‌ಗಳಲ್ಲಿ ಇಂಗ್ಲೆಂಡ್ ವಿರುದ್ಧ ಸೋಲನುಭವಿಸಿರುವುದು ಆಸ್ಟ್ರೇಲಿಯಾ ತಂಡಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು. ಮುಂಬರುವ ಭಾರತ, ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿಯಲ್ಲಿ ಎರಡೂ ತಂಡಗಳಿಗೂ ಉತ್ತಮ ಸವಾಲು ಎದುರಾಗಲಿದೆ. ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿ, ನಂತರ ಸರಣಿಯನ್ನು 2-1 ಅಂತರದಲ್ಲಿ ಸೋತಿದೆ. ಈ ಫಲಿತಾಂಶದಿಂದ ಭಾರತ ತಂಡ ದುರ್ಬಲವಾಗಿರುವುದು ಎದ್ದು ಕಾಣುತ್ತದೆ ಎಂದು ಲಾಸನ್ ತಿಳಿಸಿದರು.

ಮ್ಯಾರಥಾನ್‌ನಿಂದ ಫೌಜಾ ನಿವೃತ್ತಿ ?
ನವದೆಹಲಿ:
ವಿಶ್ವದ ಅತ್ಯಂತ ಹಿರಿಯ ಮ್ಯಾರಥಾನ್ ಸ್ಪರ್ಧಿಯಾದ ಫೌಜಾ ಸಿಂಗ್ ಅವರು ಮೆರಥಾನ್‌ನಿಂದ ನಿವೃತ್ತಿಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಮಾರ್ಚ್ 24ರಂದು ಹಾಂಗ್‌ಕಾಂಗ್‌ನಲ್ಲಿ ನಡೆಯಲಿರುವ ಮೆರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಅವರು, ಆ ಸ್ಪರ್ಧೆಯ ನಂತರ ನಿವೃತ್ತಿ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಭಾರತೀಯ ಮೂಲದ ಫೌಜಾ ಸಿಂಗ್‌ಗೆ ಈಗ 101 ವರ್ಷ. ಸದ್ಯಕ್ಕೆ ಬ್ರಿಟನ್‌ನಲ್ಲಿ ವಾಸವಾಗಿರುವ ಅವರು ಏಪ್ರಿಲ್ 1ರಂದು 102ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಅತಿ ಹಿರಿಯ ಮೆರಥಾನ್ ಓಟಗಾರನೆಂಬ ಹೆಗ್ಗಳಿಕೆ ಪಡೆದಿರುವ ಅವರನ್ನು ಕಳೆದ ವರ್ಷ ಲಂಡನ್‌ನಲ್ಲಿ ನಡೆದಿದ್ದ ಒಲಿಂಪಿಕ್ಸ್‌ಗೂ ಮುನ್ನ ನಡೆದಿದ್ದ ಒಲಿಂಪಿಕ್ಸ್ ಜ್ಯೋತಿ ರನ್ನಿಂಗ್‌ನಲ್ಲಿ ಜ್ಯೋತಿ ಹಿಡಿದು ಸಾಗುವ ಗೌರವ ನೀಡಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement