ಮಿನುಗಿದ ಧ್ರುವ, ಸಕ್ಸೇನಾ
2ನೇ ಅಭ್ಯಾಸ ಪಂದ್ಯ ಡ್ರಾಗೂ ಮುನ್ನ ಫಾಲೋ ಆನ್ಗೆ ಸಿಲುಕಿದ್ದ ಆಸೀಸ್
ಚೆನ್ನೈ: ಭಾರತ ಎ ತಂಡದ ಎಡಗೈ ಸ್ಪಿನ್ನರ್ ರಾಕೇಶ್ ಧ್ರುವ ಮತ್ತು ಸ್ಪಿನ್ನರ್ ಜಲಜ ಸಕ್ಸೇನಾ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ, 2ನೇ ಅಭ್ಯಾಸ ಪಂದ್ಯ ಡ್ರಾದಲ್ಲಿ ಅಂತ್ಯಗೊಳ್ಳುವ ಮುನ್ನವೇ ಫಾಲೋ ಆನ್ಗೆ ಸಿಲಿಕಿದ ಪ್ರಸಂಗ ಸೋಮವಾರ ನಡೆಯಿತು.
ಗುಜರಾತ್ನ ಧ್ರುವ 51 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ಮಧ್ಯಪ್ರದೇಶದ ಆಲ್ರೌಂಡರ್ ಸಕ್ಸೇನಾ 61 ರನ್ ನೀಡಿ 4 ವಿಕೆಟ್ ಪಡೆದರು. ಈ ಇಬ್ಬರು ಬೌಲರ್ಗಳ ಬೌಲಿಂಗ್ ದಾಳಿಗೆ ನಲುಗಿದ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ನಲ್ಲಿ ಕೇವಲ 235 ರನ್ಗಳಿಗೆ ಆಲೌಟ್ ಆಗುವ ಮೂಲಕ ಫಾಲೋ ಆನ್ಗೆ ಸಿಲುಕಿತು.
ಗೌತಮ್ ಗಂಭೀರ್ ನಾಯಕತ್ವದ ಭಾರತ ಎ ತಂಡ ಮೊದಲ ಇನಿಂಗ್ಸ್ನಲ್ಲಿ 451 ರನ್ಗಳ ಬೃಹತ್ ಮೊತ್ತ ಪೇರಿಸಿತ್ತು.
ಫಾಲೋ ಆನ್ಗೆ ಸಿಲುಕಿದ ನಂತರ ದ್ವಿತೀಯ ಇನಿಂಗ್ಸ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ ಮೂರು ವಿಕೆಟ್ ಕಳೆದುಕೊಂಡು 195 ರನ್ ಗಳಿಸಿತು.
ಈ ವಿಜಯ ಭಾರತ ಎ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಇದಕ್ಕೂ ಮುನ್ನ ನಡೆದ ಮೊದಲ ಅಭ್ಯಾಸ ಪಂದ್ಯದಲ್ಲೂ ಆಸ್ಟ್ರೇಲಿಯಾ 241 ರನ್ಗಳಿಗೆ ಆಲೌಟ್ ಆಗಿತ್ತು. ಹೀಗಾಗಿ ಎರಡೂ ಅಭ್ಯಾಸ ಪಂದ್ಯಗಳ ಇನಿಂಗ್ಸ್ ಒಂದರಲ್ಲಿ ಆಸ್ಟ್ರೇಲಿಯಾ 250 ಹೆಚ್ಚು ರನ್ ಪೇರಿಸುವಲ್ಲಿ ವಿಫಲವಾದಂತಾಗಿದೆ.
ಮೊದಲ ಅಭ್ಯಾಸ ಪಂದ್ಯದಲ್ಲಿ ಫರ್ವೇಜ್ ರಸೂಲ್ ಅವರು, ಆಸ್ಟ್ರೇಲಿಯಾ ಬ್ಯಾಟ್ಸ್ಮನ್ಗಳು ಸ್ಪಿನ್ನರ್ಗಳನ್ನು ಎದುರಿಸುವಲ್ಲಿ ವೈಫಲ್ಯ ಕಾಣುತ್ತಿರುವುದನ್ನು ತೋರಿಸಿಕೊಟ್ಟಿದ್ದರು. ನಂತರ ಧೃವ ಮತ್ತು ಸಕ್ಸೇನಾ ಎರಡನೇ ಅಭ್ಯಾಸ ಪಂದ್ಯದಲ್ಲಿ ಇದನ್ನು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಈಗ ಆಸ್ಟ್ರೇಲಿಯಾ ತಂಡ ಸ್ಪಿನ್ ಬೌಲಿಂಗ್ ಭೀತಿಯನ್ನು ಎದುರಿಸುತ್ತಿದೆ.
ಇದು ಭಾರತದ ಸ್ಪಿನ್ನರ್ಗಳಾದ ಹರ್ಭಜನ್ ಸಿಂಗ್, ರವಿಚಂದ್ರನ್ ಅಶ್ವಿನ್, ಹಾಗೂ ಪ್ರಗ್ಯಾನ್ ಓಜಾ ಅವರ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸಿದ್ದು, ಮೊದಲ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸ್ಪಿನ್ನರ್ಗಳು ಮಿನುಗುವ ನಿರೀಕ್ಷೆಗಳಿವೆ.
ಭಾನುವಾರ ದಿನಾಂತ್ಯಕ್ಕೆ 131ಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ, ಮ್ಯಾಥ್ಯೂ ವೇಡ್ (44) ಮತ್ತು ಮೋಯಿಸಿಸ್ ಹೆನ್ರಿಕ್ (33) ಅವರೊಂದಿಗೆ ಸೋಮವಾರ ದಿನದ ಆಟ ಆರಂಭಿಸಿತು. ಈ ಇಬ್ಬರು ಬ್ಯಾಟ್ಸ್ಮನ್ಗಳು ಅಂತಿಮ ದಿನ 5ನೇ ವಿಕೆಟ್ ಜತೆಯಾಟದಲ್ಲಿ 49 ರನ್ ಪೇರಿಸುವ ಮೂಲಕ ಆಸ್ಟ್ರೇಲಿಯಾ 176 ರನ್ ಗಳಿಸಿತು.
ಇಬ್ಬರೂ ಭಾರತದ ಸ್ಪಿನ್ ದಾಳಿಯನ್ನು ಎದುರಿಸುವಲ್ಲಿ ಸಂಪೂರ್ಣ ವಿಫಲವಾದರು. ಮೂರು ಸಿಕ್ಸರ್ ಮತ್ತು ಎರಡು ಬೌಂಡರಿ ಗಳಿಸಿದ ಹೆನ್ರಿಕ್ಸ್ ಸ್ಪಿನ್ನರ್ ಧ್ರುವ ಬೌಲಿಂಗ್ನಲ್ಲಿ ತಮ್ಮ ವಿಕೆಟ್ ಒಪ್ಪಿಸಿ ಪೆವಿಲಿಯನ್ಗೆ ಮರಳಿದರು.
75 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ 31ರ ಹರೆಯದ ಧ್ರುವಅವರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ಕನಸು ಕಾಣುವುದು ಕಷ್ಟಸಾಧ್ಯವೇ ಸರಿ. ಆದರೆ, ಅವರ ವೃತ್ತಿ ಜೀವನದಲ್ಲಿ ಇದು ಸ್ಮರಣೀಯ ಸಾಧನೆಯಾಗಿ ಉಳಿಯುವುದರಲ್ಲಿ ಎರಡು ಮಾತಿಲ್ಲ.
ಸಂಕ್ಷಿಪ್ತ ಸ್ಕೋರ್
ಮೊದಲ ಇನಿಂಗ್ಸ್
ಭಾರತ ಎ ತಂಡ 451/10
ಆಸ್ಟ್ರೇಲಿಯಾ 235/10
ವೇಡ್ 44
ಹೆನ್ರಿಕ್ 33
ಬೌಲಿಂಗ್:
ಧ್ರುವ 51/5, ಜಲಜ 61/4
ದ್ವೀತಿಯ ಇನಿಂಗ್ಸ್ ಆಸ್ಟ್ರೇಲಿಯಾ 195/3
ವ್ಯಾಟ್ಸನ್ 60
ಕೊವನ್ 53
ಬೌಲಿಂಗ್: ಧೃವ 57/1 ಜಲಜ 37/1