ಹಜಾರೆ: ನಾಕೌಟ್ ಹಂತಕ್ಕೆಕರ್ನಾಟಕ ತಂಡ
ಪುರ್ವೋರಿಮ್: ಇಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರಿಸಿರುವ ಕರ್ನಾಟಕ ತಂಡ, ಸತತ ನಾಲ್ಕನೇ ಜಯ ದಾಖಲಿಸುವುದರೊಂದಿಗೆ ನಾಕೌಟ್ ಹಂತಕ್ಕೆ ಲಗ್ಗೆ ಇಟ್ಟಿದೆ.
ಸೋಮವಾರ ನಡೆದ ನಾಲ್ಕನೇ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಭರ್ಜರಿ ಆಟ ಪ್ರದರ್ಶಿಸಿದ ರಾಜ್ಯ ತಂಡ 47ರನ್ಗಳ ಜಯ ಸಾಧಿಸಿದೆ. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕರ್ನಾಟಕ ತಂಡ ಅದ್ಭುತ ಆರಂಭ ಪಡೆದು ನಿಗಧಿತ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 305 ರನ್ಗಳಿಸಿತು. ಕರ್ನಾಟಕ ತಂಡ ನೀಡಿದ ಬೃಹತ್ ಗುರಿಯನ್ನು ಬೆನ್ನತ್ತಿದ ಹೈದರಾಬಾದ್ ತಂಡ 46.4 ಓವರ್ಗಳಲ್ಲಿ 258 ರನ್ಗಳಿಸಿ ಆಲೌಟ್ ಆಗುವ ಮೂಲಕ 47 ರನ್ಗಳ ಸೋಲನುಭವಿಸಿತು.
ಭರ್ಜರಿ ಜೋಡಿ: ಕರ್ನಾಟಕದ ಪರ ಆರಂಭಿಕರಾಗಿ ಕಣಕ್ಕಿಳಿದ ಕೆ.ಎಲ್.ರಾಹುಲ್ ಹಾಗೂ ರಾಬಿನ್ ಉತ್ತಪ್ಪ ಮೊದಲ ವಿಕೆಟ್ಗೆ 206 ರನ್ಗಳ ಜತೆಯಾಟ ನೀಡಿದರು. 107 ಎಸೆತಗಳನ್ನು ಎದುರಿಸಿದ ರಾಹುಲ್ 9 ಬೌಂಡರಿ ಸೇರಿದ 110 ರನ್ ಗಳಿಸಿದರು. ರಾಹುಲ್ ಜತೆಗೆ ಕ್ರೀಸ್ಗೆ ಬಂದ ರಾಬಿನ್ ಉತ್ತಪ್ಪ 108 ಎಸೆತಗಳನ್ನು ಎದುರಿಸಿ 103 ರನ್ ಗಳಿಸಿದರು. ನಂತರ ಮನೀಷ್ ಪಾಂಡೆ 39 ಎಸೆತಗಳಲ್ಲಿ 42 ರನ್ಗಳಿಸಿದರು.
ಕರ್ನಾಟಕ ತಂಡ ನೀಡಿದ ಗುರಿಯನ್ನು ಬೆನ್ನತ್ತಿದ ಹೈದರಾಬಾದ್ ತಂಡ ಉತ್ತಮ ಆರಂಭ ಪಡೆಯಲಿಲ್ಲ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳಾದ ಥಾಮಸ್ 24, ರವಿತೇಜ 16 ರನ್ಗಳಿಸಿ ಔಟಾದರು. ಈ ವೇಳೆ ಜತೆಯಾದ ವಿಹಾರಿ (84) ಹಾಗೂ ಸಂದೀಪ್ (72) 140 ರನ್ಗಳ ಜತೆಯಾಟ ನೀಡಿ ಉತ್ತಮ ಹೋರಾಟ ನಡೆಸಿದರು. ನಂತರ ಬಂದ ಬ್ಯಾಟ್ಸ್ಮನ್ಗಳು ಹೆಚ್ಚು ಹೊತ್ತು ಕ್ರಿಸ್ನಲ್ಲಿ ನಿಲ್ಲದ ಕಾರಣ ಹೈದರಾಬಾದ್ ತಂಡ ಸೋಲಬೇಕಾಯಿತು. ಕರ್ನಾಟಕದ ಪರ ಅಕ್ಷಯ್ ಹಾಗೂ ನಾಯಕ ಬಿನ್ನಿ ತಲಾ 4 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ 305/9 (50 ಓ.)
ರಾಹುಲ್ 110 (107), ಉತ್ತಪ್ಪ 103 (108)
ಬೌಲಿಂಗ್: ಆಶಿಶ್ 88/3, ಮಿಲಿಂದ್ 57/2
ಹೈದರಾಬಾದ್ 258/10 (46.4 ಓ.)
ವಿಹಾರಿ 84 (76), ಸಂದೀಪ್ 72 (77)
ಬೌಲಿಂಗ್: ಅಕ್ಷಯ್ 50/4, ಬಿನ್ನಿ 56/4