ಕರಾಟೆ: ರಾಜ್ಯಕ್ಕೆ 5 ಪದಕ
ಬೆಂಗಳೂರು: ಇತ್ತೀಚೆಗೆ ಗೋವಾದ ಪಣಜಿಯಲ್ಲಿ ಆಯೋಜಿಸಿದ್ದ 30ನೇ ರಾಷ್ಟ್ರೀಯ ಕರಾಟೆ ಚಾಂಪಿಯನ್ಷಿಪ್ನಲ್ಲಿ ರಾಜ್ಯಕ್ಕೆ 5 ಪದಕಗಳು ಲಭಿಸಿವೆ.
ಸೆನ್ಸೀ ಕರುಣಾ ಹೊರೊ ಮಹಿಳೆಯರ ಮುಕ್ತ ವಿಭಾಗದಲ್ಲಿ ಚಿನ್ನದ ಪದಕ ಪಡೆದರು. ಇದರೊಂದಿಗೆ ಅವರು ಮತ್ತೊಮ್ಮೆ ರಾಷ್ಟ್ರೀಯ ಚಾಂಪಿಯನ್ ಪಟ್ಟಕ್ಕೇರಿದ್ದಾರೆ. ಭಮಿಪತಿ ಶೃತಿ 14 ವರ್ಷದ ಕಮಿತೆ ವಿಭಾಗದಲ್ಲಿ ಕಂಚಿನ ಪದಕ ಪಡೆದರು.
ಇನ್ನು ಪುರುಷರ ವಿಭಾಗದಲ್ಲಿ ಶ್ರೀರಾಮ್ 21 ವರ್ಷದ ಕಮಿತೆ ವಿಭಾಗದಲ್ಲಿ ಕಂಚಿನ ಪದಕ ಪಡೆದರು.
ನಂತರ ರಾಜ್ ಕುಮಾರ್ 18 ಹಾಗೂ 16ನೇ ವಯಸ್ಸಿನೊಳಗಿನ ಕಮಿತೆ ವಿಭಾಗದಲ್ಲಿ ಕ್ರಮವಾಗಿ ಕಂಚು ಹಾಗೂ ಬೆಳ್ಳಿ ಪದಕ ಪಡೆದರು.