ಕ್ರಿಕೆಟ್ನಿಂದ ಓದು ಮರೆತ ಧೋನಿ
ಮಹೇಂದ್ರ ಸಿಂಗ್ ಧೋನಿ ಬಿ ಕಾಂ ಪದವಿಯ ಪರೀಕ್ಷೆಗೂ ಹಾಜರಾಗಲು ವಿಫಲವಾಗಿದ್ದಾರೆ.
ರಾಂಚಿ: ಬಿಡುವಿಲ್ಲದೆ ಕ್ರಿಕೆಟ್ನಲ್ಲಿ ತೊಡಗಿಕೊಂಡಿರುವ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಬಿ ಕಾಂ ಪದವಿಯ ಮೊದಲ ಸೆಮಸ್ಟರ್ ಪರೀಕ್ಷೆಗೂ ಹಾಜರಾಗಲು ವಿಫಲವಾಗಿದ್ದಾರೆ. ಐದು ವರ್ಷಗಳ ಹಿಂದೆಯೇ ರಾಂಚಿ ಕಾಲೇಜ್ನಲ್ಲಿ ಪ್ರವೇಶ ಪಡೆದಿದ್ದಾರೆ. 2008ರಲ್ಲಿ ಇಲ್ಲಿನ ಸೇಂಟ್ ಕ್ಷೇವಿಯರ್ ಕಾಲೇಜ್ನಲ್ಲಿ ಪ್ರವೇಶ ಪಡೆದಿರುವ ಧೋನಿ ಆರು ಸೆಮೆಸ್ಟ್ರ್ಗಳಲ್ಲಿ ಇದುವರೆಗೂ ಒಂದು ಸೆಮೆಸ್ಟರ್ನಲ್ಲೂ ಪಾಸ್ ಆಗಿಲ್ಲ. ಬಿಡುವಿಲ್ಲದೇ ಕ್ರಿಕೆಟ್ನಲ್ಲಿ ನಿರತವಾಗಿರುವ ಧೋನಿ ಐದು ವರ್ಷಗಳಿಂದ ಇದುವರೆಗೂ ನಡೆದ ಯಾವ ಪರೀಕ್ಷೆಗೂ ಹಾಜರಾಗಲು ಸಾಧ್ಯವಾಗಿಲ್ಲವಂತೆ. 'ಧೋನಿ ನಮ್ಮ ಕಾಲೇಜ್ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದಾರೆ. ಐದು ವರ್ಷಗಳ ಹಿಂದೆಯೇ ಅವರು 3 ವರ್ಷದ ಪದವಿಗೆ ಪ್ರವೇಶ ಪಡೆದಿದ್ದಾರೆ. ಈಗ ಒಂದು ವೇಳೆ ಧೋನಿ ಪದವಿ ಪಡೆಯಬೇಕಾದರೆ, ಮತ್ತೆ ಹೊಸದಾಗಿ ಪ್ರವೇಶ ಪಡೆಯಬೇಕು. ಮೊದಲ ಸೆಮೆಸ್ಟರ್ಗೆ ಬೇಕಾದ ಎಲ್ಲ ಪುಸ್ತಕಗಳನ್ನು ನಾವು ಧೋನಿ ಅವರಿಗೆ ಕಳುಹಿಸಿಕೊಟ್ಟಿದ್ದೇವೆ. ಆದರೆ, ಅವರು ಇದುವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆ ತೋರಿಸಿಲ್ಲ' ಎಂದು ಸೇಂಟ್ ಕ್ಷೇವಿಯರ್ ಕಾಲೇಜ್ನ ಪ್ರಾಂಶಿಪಾಲರಾದ ನಿಕೋಲಸ್ ಟೇಲೆ ಹೇಳಿದ್ದಾರೆ.