ಪ್ರೇಯಸಿ ಕೊಲೆ ಪೂರ್ವಯೋಜಿತ?
ಕೋರ್ಟ್ನಲ್ಲಿ ಗಳಗಳನೆ ಅತ್ತ ಪಿಸ್ಟೋರಿಯಸ್: ವಿಚಾರಣೆಯಲ್ಲಿ ವಾದ-ಪ್ರತಿವಾದಗಳ ಅಬ್ಬರ
ಪ್ರಿಟೋರಿಯಾ: ಪ್ರೇಮಿಗಳ ದಿನದಂದೇ ತಮ್ಮ ಪ್ರೇಯಸಿಯನ್ನು ಹತ್ಯೆ ಮಾಡಿದ ಬ್ಲೇಡ್ ರನ್ನರ್ ಆಸ್ಕರ್ ಪಿಸ್ಟೋರಿಯಸ್ ಅವರ ಕುಕೃತ್ಯ ಪೂರ್ವಯೋಜಿತವಾದದ್ದು ಎಂದು ಪ್ರಕರಣದಲ್ಲಿ ವಿಚಾರಣೆ ನಡೆಸುತ್ತಿರುವ ಪಬ್ಲಿಕ್ ಪ್ರಾಸಿಕ್ಯೂಟರ್ ಗೆರ್ರಿ ನೆಲ್ ಅವರು ವಾದ ಮಂಡಿಸಿದ್ದಾರೆ. ಇಲ್ಲಿನ ಸ್ಥಳೀಯ ನ್ಯಾಯಾಲಯದಲ್ಲಿ ಮಂಗಳವಾರ ನಡೆದ ವಿಚಾರಣೆ ಸಂದರ್ಭದಲ್ಲಿ ಗೆರ್ರಿ ಅವರು ಈ ವಾದ ಮಂಡಿಸಿದರು.
ಫೆ. 15ರಂದು ಪಿಸ್ಟೋರಿಯಸ್ ಅವರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿತ್ತು. ಅಲ್ಲದೇ, ಅಂದೇ ಅವರ ವಿರುದ್ಧ ಆರೋಪಪಟ್ಟಿಯನ್ನೂ ದಾಖಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ, ಮಂಗಳವಾರ ಪುನಃ ಪಿಸ್ಟೋರಿಯಸ್ ಅವರನ್ನು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಕೊಲೆ ನಡೆದ ನಂತರ, ನ್ಯಾಯಾಲಯಕ್ಕೆ ಅವರು ಹಾಜರಾಗುತ್ತಿರುವುದು ಇದು ಎರಡನೇ ಬಾರಿ.
ಸಾಕ್ಷ್ಯಾಧಾರ: ಫೆ. 14ರ ಮುಂಜಾನೆ, ಪಿಸ್ಟೋರಿಯಸ್ ಅವರ ಪ್ರೇಯಸಿ ರೀವಾ ಸ್ಟೀನ್ಕ್ಯಾಂಪ್ ಅವರ ಹತ್ಯೆ ನಡೆದಿತ್ತು. ಈ ಹಿನ್ನೆಲೆಯಲ್ಲಿ, ಪಿಸ್ಟೋರಿಯಸ್ ಅವರನ್ನು ಬಂಧಿಸಿದ್ದ ಪೋಲೀಸರು ಅವರ ಮನೆಯನ್ನು ಶೋಧಿಸಿದ್ದರು. ಆಗ, ಪಿಸ್ಟೋರಿಯಸ್ ಮನೆಯಲ್ಲಿ ರಕ್ತಸಿಕ್ತ ಕ್ರಿಕೆಟ್ ಬ್ಯಾಟ್ ಪತ್ತೆಯಾಗಿತ್ತು. ಪಿಸ್ಟೋರಿಯಸ್ ಮನೆಯ ಬಾತ್ರೂಂನಲ್ಲಿ ಗುಂಡು ಹಾರಿಸಿ, ಸ್ಟೀನ್ಕ್ಯಾಂಪ್ ಅವರನ್ನು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿತ್ತು.
ಗೆರ್ರಿ ಅವರ ವಾದವೇನು ?: ಮಂಗಳವಾರ ನಡೆದ ವಿಚಾರಣೆ ಸಂದರ್ಭದಲ್ಲಿ, ಪ್ರಾಸಿಕ್ಯೂಟರ್ ಅವರು ಪಿಸ್ಟೋರಿಯಸ್ ಅವರೇ ಕೊಲೆಗಾರ ಎನ್ನುವುದಕ್ಕೆ ಹಲವಾರು ಸಾಕ್ಷಾಧಾರಗಳಿವೆ. ಅಲ್ಲದೇ, ಕೊಲೆ ನಡೆದ ಮನೆಯನ್ನು ಪರಿಶೀಲಿಸುವ ಪೊಲೀಸರಿಗೆ ಒಂದು ರಕ್ತಸಿಕ್ತ ಬ್ಯಾಟ್ ಪತ್ತೆಯಾಗಿದೆ.
ಕೊಲೆ ನಡೆಯುವುದಕ್ಕೂ ಮುನ್ನ ರೀವಾ ಸ್ಟೀನ್ಕ್ಯಾಂಪ್ ಅವರನ್ನು ಬ್ಯಾಟ್ನಿಂದ ಹೊಡೆಯಲಾಗಿದೆ ಎಂದರು. ಆಕೆಯ ಕೊಲೆಯು ಮನೆಯಲ್ಲಿನ ಸ್ನಾನದ ಕೋಣೆಯಲ್ಲಿ ಆಗಿದ್ದು, ಸ್ನಾನದ ಕೋಣೆಯು ಒಳಗಿನಿಂದ ಚಿಲಕ ಹಾಕಿದ್ದರೂ ಆಕೆಯನ್ನು ಹೊರಗಿನಿಂದಲೇ ಗುಂಡು ಹಾರಿಸಿ ಕೊಲ್ಲಲಾಗಿದೆ. ಅಲ್ಲದೇ, ಪಿಸ್ಟೋರಿಯಸ್ ಮನೆಯಲ್ಲಿಯೇ ಅವರು ಸುಮಾರು ಏಳು ಮೀಟರ್ಗಳಷ್ಟು ದೂರದವರೆಗೂ ಆಕೆಯನ್ನು ಬೆನ್ನಟ್ಟಿ ಆಕೆಯ ಮೇಲೆ ಗುಂಡು ಹಾರಿಸಿದ್ದಾರೆ ಎಂಬ ವಾದ ಮಂಡಿಸಿದರು.
ಸಾಕ್ಷಾಧಾರಗಳ ಪ್ರಕಾರ, ಕೊಲೆಯಾಗುವ ಸಂದರ್ಭದಲ್ಲಿ ಸ್ಟೀನ್ಕ್ಯಾಂಪ್ ಅವರು ಸ್ನಾನದ ಕೋಣೆಯಲ್ಲಿ ಅಡಗಿದ್ದರು. ಸ್ನಾನದ ಕೋಣೆಯ ಚಿಲಕವನ್ನೂ ಹಾಕಿಕೊಂಡಿದ್ದರು. ಆದರೆ, ಸ್ನಾನದ ಕೋಣೆಯ ಹೊರಗಡೆ ನಿಂತು ಬಾಗಿಲ ಕಡೆಗೇ ಗುಂಡು ಹಾರಿಸಲಾಗಿದೆ. ಪಿಸ್ಟೋರಿಯಸ್ ಅವರ 9 ಎಂ.ಎಂ. ಪಿಸ್ತೂಲಿನಿಂದ ಹಾರಿ ಬಂದ ಗುಂಡುಗಳು ಸ್ನಾನದ ಕೋಣೆಯ ಬಾಗಿಲನ್ನೂ ತೂರಿಬಂದು ಸ್ಟೀನ್ಕ್ಯಾಂಪ್ ಅವರ ದೇಹ ಹೊಕ್ಕಿವೆ ಎಂದು ಗೆರ್ರಿ ಅವರು ವಾದ ಮಂಡಿಸಿದರು. ಈ ಮೂಲಕ, ಗೆರ್ರಿ ಅವರು ಈ ಕೊಲೆ ಪೂರ್ವಯೋಜಿತ ಎಂದು ವಾದ ಮಂಡಿಸಿದ್ದರು. ಕೊಲೆ ನಡೆಯುವುದಕ್ಕೂ ಮುನ್ನ ಪಿಸ್ಟೋರಿಯಸ್, ರೀವಾ ಸ್ಟೀವ್ಕ್ಯಾಂಪ್ ಅವರನ್ನು ಬ್ಯಾಟ್ನಿಂದ ಥಳಿಸಿದ್ದಾರೆ. ಆಗ,ಅವರು ಸ್ನಾನದ ಕೋಣೆಯೊಳಕ್ಕೆ ಹೋಗಿ ಬಚ್ಚಿಟ್ಟುಕೊಂಡಿದ್ದಾರೆ. ಇದರಿಂದ ಮತ್ತಷ್ಟು ಕ್ಷುದ್ರನಾದ ಪಿಸ್ಟೋರಿಯಸ್, ಸ್ನಾನದ ಕೋಣೆಯ ಹೊರಗಿನಿಂದ ಬಾಗಿಲ ಕಡೆಗೆ ಗುಂಡು ಹಾರಿಸಿ ಆಕೆಯನ್ನು ಹತ್ಯೆ ಮಾಡಿದ್ದಾರೆ ಎಂದು ಗೆರ್ರಿ ವಾದಿಸಿದರು.
ಡಿಫೆನ್ಸ್ ವಾದವೇನು ?: ಹತ್ಯೆ ನಡೆದ ದಿನವೇ ಪೊಲೀಸರಿಗೆ ಹೇಳಿಕೆ ನೀಡಿದ್ದ ಪಿಸ್ಟೋರಿಯಸ್, ನಸುಕಿನ ಹೊತ್ತಿನಲ್ಲಿ ಮೆಲ್ಲಗೇ ಮನೆಯನ್ನು ರೀವಾ ಅವರು ಪ್ರವೇಶಿದ್ದನ್ನು ತಾವು ಯಾರೋ ಕಳ್ಳರು ಮನೆಗೆ ನುಗ್ಗಿದ್ದಾರೆಂದು ಅನುಮಾನಿಸಿ ಗುಂಡು ಹಾರಿಸಿದ್ದಾಗಿ ಹೇಳಿದ್ದರು.
ಮಂಗಳವಾರ ನಡೆದ ವಿಚಾರಣೆಯ ವೇಳೆಯೂ ಪಿಸ್ಟೋರಿಯಸ್ ಅವರ ಪರವಾಗಿ ವಾದ ಮಂಡಿಸಿದ ವಕೀಲರು ಇದನ್ನೇ ಪುನರುಚ್ಚರಿಸಿದ್ದಾರೆ. ಅಲ್ಲದೇ, ರಕ್ತಸಿಕ್ತ ಬ್ಯಾಟ್ ಹಾಗೂ ಮುಚ್ಚಿದ ಬಾತ್ರೂಂನ ಬಾಗಿಲ ಕಡೆಯಿಂದ ಗುಂಡು ಹಾರಿಸಿರುವ ಗುರುತು - ಇಷ್ಟನ್ನೇ ಆಧಾರವಾಗಿಟ್ಟುಕೊಂಡು ಪಿಸ್ಟೋರಿಯಸ್ ಅವರು ಪೂರ್ವಯೋಜಿತವಾಗಿ ಕೊಲೆ ಮಾಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಸಾಕ್ಷ್ಯಾಧಾರಗಳು ಹೇಳುವ ಕಥೆಯ ಹೊರತಾಗಿಯೂ ಘಟನೆ ನಡೆದಿರಲಿಕ್ಕೂ ಸಾಧ್ಯ ಎಂದು ಅವರು ವಾದ ಮಂಡಿಸಿದ್ದಾರೆ.
ಆಸ್ಕರ್ ಅಫಿಡವಿಟ್: ಈ ಸಂದರ್ಭದಲ್ಲಿ, ಪಿಸ್ಟೋರಿಯಸ್ ಅವರು ನ್ಯಾಯಾಲಯಕ್ಕೆ ಅಫಿಡವಿಟ್ ಒಂದನ್ನು ಸಲ್ಲಿಸಿದ್ದು, ಅದರಲ್ಲಿ ತಾವು ನಿರ್ದೋಷಿ ಎಂದು ಹೇಳಿಕೆ ನೀಡಿದ್ದಾರೆ.
'ಪ್ರೇಮಿಗಳ ದಿನದಂದು ತಮಗೆ ಅಚ್ಚರಿ ನೀಡಲೆಂದು, ಸ್ಟೀವ್ಕ್ಯಾಂಪ್ ಅವರು ಮನೆಯ ಬಾತ್ರೂಂ ಬಳಿಯ ಕಿಟಕಿಯ ಮೂಲಕ ಮನೆಯನ್ನು ಪ್ರವೇಶಿದ್ದರು. ಅದು ನನಗೆ ಗೊತ್ತಿರಲಿಲ್ಲ. ನಾನು ಯಾರೋ ಕಳ್ಳರು ಮನೆಯನ್ನು ಹೊಕ್ಕಿದ್ದಾರೆ ಎಂದು ಭಯಭೀತನಾದೆ. ತಕ್ಷಣವೇ ನನ್ನ ಬಳಿಯಿದ್ದ ಪಿಸ್ತೂಲನ್ನು ತೆಗೆದುಕೊಂಡು ಸ್ನಾನದ ಕೋಣೆಯ ಬಳಿಯ ಕಿಟಕಿಯತ್ತ ಬಂದೆ. ಆದರೆ, ಬಂದವರು ಸ್ನಾನದ ಕೋಣೆಯೊಳಕ್ಕೆ ಹೋಗಿ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದು ಗೊತ್ತಾಯಿತು. ಇದರಿಂದ ಮತ್ತಷ್ಟು ಭಯಭೀತನಾದ ನಾನು, ನನ್ನಲ್ಲಿದ್ದ ಪಿಸ್ತೂಲಿನಿಂದ ಸ್ನಾನದ ಕೋಣೆಯ ಬಾಗಿಲ ಕಡೆಗೇ ಗುಂಡು ಹಾರಿಸಿದೆ' ಎಂದು ಪಿಸ್ಟೋರಿಯಸ್ ನ್ಯಾಯಾಲಯದಲ್ಲಿ ಹೇಳಿದರು. ಅವರು ಸಲ್ಲಿಸಿರುವ ಅಫಿಡೆವಿಟ್ನಲ್ಲಿಯೂ ಇದೇ ಅಂಶವನ್ನು ಅವರು ಉಲ್ಲೇಖಿಸಿದ್ದಾರೆ. ತಮ್ಮ ಪರವಾಗಿ ಮಾತನಾಡುತ್ತಾ ಗದ್ಗದಿತರಾದ ಅವರು, ಬಿಕ್ಕಿಬಿಕ್ಕಿ ಅತ್ತರು.
ನ್ಯಾಯಾಧೀಶರು ಹೇಳಿದ್ದೇನು ?: ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರಾದ ಡೆಸ್ಮಂಡ್ ನೈರ್ ಅವರು, ಪ್ರಕರಣದ ವಿಚಾರಣೆ ಮುಗಿಯುವವರೆಗೂ ಪಿಸ್ಟೋರಿಯಸ್ಗೆ ಜಾಮೀನು ನೀಡುವ ಹಾಗಿಲ್ಲ ಎಂದು ಹೇಳಿದರು. ಅಲ್ಲದೇ, ರೀವಾ ಸ್ಟೀವ್ಕ್ಯಾಂಪ್ ಅವರ ಕೊಲೆ ಪ್ರಕರಣವು ಒಂದು ಪೂರ್ವಯೋಜಿತವಾದುದು ಎಂಬ ಪ್ರಾಸಿಕ್ಯೂಟರ್ ವಾದವನ್ನೂ ತಳ್ಳಿಹಾಕುವಂತಿಲ್ಲ. ಮುಂದಿನ ವಿಚಾರಣೆಯಲ್ಲಿ ಅದು ಸತ್ಯವೋ, ಸುಳ್ಳೋ ಎಂದು ಸಾಬೀತಾಗಲಿದೆ ಎಂದು ಹೇಳಿದರು.
ನ್ಯಾಯಾಲಯದಲ್ಲಿ ಗಮನ ಸೆಳೆದ ವಾದ...
ತಮ್ಮ ಕಡೆಯ ವಾದ ಗೆಲ್ಲಲು, ರೀವಾ ಅವರ ಕುಟುಂಬ ಉತ್ತಮ ವಕೀಲರನ್ನೇ ಪ್ರಕರಣದ ವಿಚಾರಣೆಗಾಗಿ ನೇಮಿಸಿದೆ. ಅತ್ತ, ಪಿಸ್ಟೋರಿಯಸ್ ಸಹಾ ದೊಡ್ಡ ಹೆಸರಿನ ವಕೀಲರು, ವಿಧಿವಿಜ್ಞಾನ ತಜ್ಞರು ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿಗಳನ್ನು ನೇಮಿಸಿದ್ದಾರೆ. ಹಾಗಾಗಿ, ಮಂಗಳವಾರದ ವಿಚಾರಣೆಯಲ್ಲಿ ವಾದ-ಪ್ರತಿವಾದಗಳು ಜೋರಾಗಿ ನಡೆದವು. ಅಲ್ಲದೇ, ಘಟಾನುಘಟಿ ವಕೀಲರ ತರ್ಕಗಳು, ವಾದ ಮಂಡಿಸುವ ರೀತಿ ಎಲ್ಲರ ಗಮನ ಸೆಳೆದವು. ಸಾಕ್ಷಾಧಾರಗಳ ಪ್ರಕಾರ, ಕೊಲೆಯಾಗುವ ಸಂದರ್ಭದಲ್ಲಿ ಸ್ಟೀನ್ಕ್ಯಾಂಪ್ ಅವರು ಸ್ನಾನದ ಕೋಣೆಯಲ್ಲಿ ಅಡಗಿದ್ದರು. ಸ್ನಾನದ ಕೋಣೆಯ ಚಿಲಕವನ್ನೂ ಹಾಕಿಕೊಂಡಿದ್ದರು. ಆದರೆ, ಸ್ನಾನದ ಕೋಣೆಯ ಹೊರಗಡೆ ನಿಂತು ಬಾಗಿಲ ಕಡೆಗೇ ಗುಂಡು ಹಾರಿಸಲಾಗಿದೆ. ಪಿಸ್ಟೋರಿಯಸ್ ಅವರ 9 ಎಂ.ಎಂ. ಪಿಸ್ತೂಲಿನಿಂದ ಹಾರಿ ಬಂದ ಗುಂಡುಗಳು ಸ್ನಾನದ ಕೋಣೆಯ ಬಾಗಿಲನ್ನೂ ತೂರಿಬಂದು ಸ್ಟೀನ್ಕ್ಯಾಂಪ್ ಅವರ ದೇಹ ಹೊಕ್ಕಿವೆ ಎಂದು ಗೆರ್ರಿ ಅವರು ವಾದ ಮಂಡಿಸಿದರು. ಈ ಮೂಲಕ, ಗೆರ್ರಿ ಅವರು ಈ ಕೊಲೆ ಪೂರ್ವಯೋಜಿತ ಎಂದು ವಾದ ಮಂಡಿಸಿದ್ದರು. ಕೊಲೆ ನಡೆಯುವುದಕ್ಕೂ ಮುನ್ನ ಪಿಸ್ಟೋರಿಯಸ್, ರೀವಾ ಸ್ಟೀವ್ಕ್ಯಾಂಪ್ ಅವರನ್ನು ಬ್ಯಾಟ್ನಿಂದ ಥಳಿಸಿದ್ದಾರೆ. ಆಗ, ಅವರು ಸ್ನಾನದ ಕೋಣೆಯೊಳಕ್ಕೆ ಹೋಗಿ ಬಚ್ಚಿಟ್ಟುಕೊಂಡಿದ್ದಾರೆ. ಇದರಿಂದ ಮತ್ತಷ್ಟು ಕ್ಷುದ್ರನಾದ ಪಿಸ್ಟೋರಿಯಸ್, ಸ್ನಾನದ ಕೋಣೆಯ ಹೊರಗಿನಿಂದ ಬಾಗಿಲ ಕಡೆಗೆ ಗುಂಡು ಹಾರಿಸಿ ಆಕೆಯನ್ನು ಹತ್ಯೆ ಮಾಡಿದ್ದಾರೆ ಎಂದು ಗೆರ್ರಿ ವಾದಿಸಿದರು.
ಮಂಗಳವಾರ ನಡೆದ ಅಂತ್ಯಕ್ರಿಯೆ...
ಪೋರ್ಟ್ ಎಲಿಜಬೆತ್: ಬ್ಲೇಡ್ ರನ್ನರ್ ಪಿಸ್ಟೋರಿಯಸ್ ಅವರಿಂದ ಹತ್ಯೆಯಾದ ರೀವಾ ಸ್ಟೀವ್ಕ್ಯಾಂಪ್ ಅವರ ಅಂತ್ಯಕ್ರಿಯೆ ಇಲ್ಲಿನ ಸ್ಮಶಾನದಲ್ಲಿ ಮಂಗಳವಾರ ನಡೆಯಿತು. ಶವವನ್ನು ಇರಿಸಲಾಗಿದ್ದ ಶವಪೆಟ್ಟಿಗೆ ಮೇಲೆ ಬಟ್ಟೆ ಹೊದಿಸಲಾಗಿತ್ತು. ಈ ಸಂದರ್ಭದಲ್ಲಿ, ರೀವಾ ಅವರ ತಾಯಿ ಜೂನ್ ಸ್ಟೀನ್ಕ್ಯಾಂಪ್, ರೀವಾ ಚಿಕ್ಕಪ್ಪ ಮೈಕಲ್ ಸ್ಟೀನ್ಕ್ಯಾಂಪ್, ಸಹೋದರ ಶಾರೋನ್ ಸ್ಟೀನ್ಕ್ಯಾಂಪ್ ಸೇರಿದಂತೆ ಸುಮಾರು ನೂರು ಮಂದಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ, ಸ್ಥಳೀಯ ಪತ್ರಿಕೆಗಳೊಂದಿಗೆ ಮಾತನಾಡಿದ ಜೂನ್ ಕ್ಯಾಂಪ್, 'ನನ್ನ ಮಗಳ ಕೊಲೆ ಹಿಂದಿರುವ ನಿಜವಾದ ಸತ್ಯ ಹೊರಬರಬೇಕು. ಆಕೆ (ರೀವಾ) ಪಿಸ್ಟೋರಿಯಸ್ನನ್ನು ತುಂಬಾ ಪ್ರೀತಿಸುತ್ತಿದ್ದಳು. ಆತನಿಗಾಗಿ ತಾನು ಸರ್ವ ತ್ಯಾಗಕ್ಕೂ ಸಿದ್ಧವಾಗಿದ್ದಳು. ಆದರೆ, ಈಗ ಆಕೆಯೇ ಇಲ್ಲವಾಗಿದ್ದಾಳೆ' ಎಂದು ಅತ್ತರು. ಈ ಸಂದರ್ಭದಲ್ಲಿ ಮಾತನಾಡಿದ ರೀವಾ ಸಹೋದರ ಶಾರೋನ್ ಸ್ಟೀನ್ಕ್ಯಾಂಪ್, 'ನಾನು ಈಗಲೇ ಪಿಸ್ಟೋರಿಯಸ್ ಅವರನ್ನು ಕೊಲೆಗಾರ ಎಂದು ದೂರಲಾರೆ. ವಿಚಾರಣೆ ನಡೆಯಲಿ. ನಿಜವಾದ ಸತ್ಯ ಹೊರಬೀಳಲಿ. ಒಂದು ವೇಳೆ ಪಿಸ್ಟೋರಿಯಸ್ ಅವರ ಕೃತ್ಯ ಪೂರ್ವಯೋಜಿತ ಎಂಬುದು ಸಾಬೀತಾದರೆ, ಅವರಿಗೆ ಶಿಕ್ಷೆಯಾಗಲಿ' ಎಂದರು. ಆದರೆ, ವಿಚಾರಣೆ ಮುಗಿಯುವವರೆಗೂ ಪಿಸ್ಟೋರಿಯಸ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಕೂಡದು ಎಂದು ರೀವಾ ಕುಟುಂಬದ ಸದಸ್ಯರು ಆಗ್ರಹಿಸಿದ್ದಾರೆ.