ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಭಾರತ- ಆಸೀಸ್ ನಡುವೆ ಪೈಪೋಟಿ ಸರಣಿ: ಯುವಿ

Srinivasa Murthy VN
Updated On : 19 Feb 2013, 10:26 am

ಮುಂಬೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಶುಕ್ರವಾರದಿಂದ ಆರಂಭವಾಗಲಿರುವ ಬಾರ್ಡರ್ ಗವಾಸ್ಕರ್ ಸರಣಿ ಪೈಪೂಟಿಯಿಂದ ಕೂಡಿರಲಿದೆ ಎಂದು ಆಸೀಸ್ ವಿರುದ್ಧದ ಮೊದಲೆರಡು ಟೆಸ್ಟ್ ಸರಣಿಗೆ ಆಯ್ಕೆ ಸಮಿತಿಯ ನಿರ್ಲಕ್ಷ್ಯಕ್ಕೊಳಗಾಗಿರುವ ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
'ಈ ಸರಣಿ ಸಂಪೂರ್ಣ ಪೈಪೋಟಿಯಿಂದ ಕೂಡಿರಲಿದೆ' ಎಂದು ಮುಂಬೈಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುದ್ದಿಗಾರರಿಗೆ ಯುವಿ ತಿಳಿಸಿದರು.
ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರುವ ಪಂಜಾಬ್‌ನ ಇನ್ನೊಬ್ಬ ಆಟಗಾರ ಹರ್ಭಜನ್ ಸಿಂಗ್ ಅವರೊಂದಿಗೆ ಇಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಯುವರಾಜ್ ಸಿಂಗ್ ಅವರನ್ನು ಸ್ವಾಗತಿಸಲಾಯಿತು.
'ಹರ್ಭಜನ್ ಭಾರತ ತಂಡದ ಉತ್ತಮ ಸ್ಪಿನ್ ಬೌಲರ್ ಆಗಿದ್ದಾರೆ, ದೊಡ್ಡ ಸಾಧನೆ ಮಾಡಿದ್ದಾರೆ. ಅಲ್ಲದೆ ತಂಡಕ್ಕೆ ಬ್ಯಾಟಿಂಗ್‌ನೊಂದಿಗೂ ಅವರು ನೆರವಾಗಿದ್ದಾರೆ. ಇದು ನನಗೆ ಸಂತಸ ಉಂಟುಮಾಡಿದೆ' ಎಂದು ಯುವರಾಜ್ ಅವರು ಭಜ್ಜಿ ಬಗ್ಗೆ ಗುಣಗಾನ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement