ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಹಜಾರೆ: ಕ್ವಾರ್ಟರ್‌ಗೆ ಕಾಲಿಟ್ಟ ಪಂಜಾಬ್

Srinivasa Murthy VN
Updated On : 19 Feb 2013, 10:27 am

ಧರ್ಮಶಾಲಾ: ವಿಜಯ್ ಹಜಾರೆ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್ ತಲುಪುವಲ್ಲಿ ಪಂಜಾಬ್ ತಂಡ ಯಶಸ್ವಿಯಾಗಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಸರ್ವೀಸಸ್ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್ (ಎಸ್‌ಎಸ್‌ಸಿಬಿ) ತಂಡದ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿದ ಪಂಜಾಬ್, ಪಂದ್ಯಾವಳಿಯ ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆಯಿತು.
ಟಾಸ್ ಗೆದ್ದ ಪಂಜಾಬ್, ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ, ಮೊದಲು ಬ್ಯಾಟಿಂಗ್‌ಗೆ ಇಳಿದ ಎಸ್‌ಎಸ್‌ಸಿಬಿಯನ್ನು 44.3 ಓವರ್‌ಗಳಲ್ಲಿ 183 ರನ್‌ಗಳಿಗೆ ಆಲೌಟ್ ಮಾಡಿತು. ಆನಂತರ, ಬ್ಯಾಟಿಂಗ್‌ಗೆ ಇಳಿದ ಪಂಜಾಬ್, 45.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿ, ಪಂದ್ಯದಲ್ಲಿ ಜಯಶಾಲಿಯಾಯಿತು. ವಲಯಾಧಾರಿತ ಅಂಕಪಟ್ಟಿಯಲ್ಲಿ 16 ಅಂಕಗಳೊಂದಿಗೆ ಪಂಜಾಬ್ ಅಗ್ರಸ್ಥಾನದಲ್ಲಿದೆ. ಲೀಗ್ ಹಂತದಲ್ಲಿ ಪಂಜಾಬ್ ನಾಲ್ಕು ಪಂದ್ಯಗಳಲ್ಲಿ ಆಡಿದ್ದು, ಅದರಲ್ಲಿ ಮೂರು ಪಂದ್ಯಗಳಲ್ಲಿ ತಂಡ ಜಯ ಸಾಧಿಸಿತ್ತು.
ಮೊದಲು ಬ್ಯಾಟ್ ಮಾಡಿದ ಎಸ್‌ಎಸ್‌ಸಿಬಿ, ಆರಂಭದಿಂದಲೂ ಮುಗ್ಗರಿಸುತ್ತಾ ಸಾಗಿತು. ಆರಂಭಿಕ ಗುಪ್ತಾ ಸೇರಿದಂತೆ, ನಾಲ್ವರು ಪ್ರಮುಖ ಬ್ಯಾಟ್ಸ್‌ಮನ್‌ಗಳು ಕೇವಲ ಒಂದಂಕಿ ಗಳಿಸಿ ಪೆವಿಲಿಯನ್‌ಗೆ ಹಿಂದಿರುಗಿದರು. ಆನಂತರ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ರಜತ್ ಪಾಲಿವಾಲ್ ಅವರು 96 ರನ್ ಗಳಿಸಿ, ಉತ್ತಮ ಹೋರಾಟ ತೋರಿದರು. ಒಟ್ಟು 118 ಎಸೆತಗಳನ್ನು ಎದುರಿಸಿದ ಅವರು, 13 ಬೌಂಡರಿ ಗಳಿಸಿದ್ದರು. ಆದರೆ, ಉಳಿದ ಆಟಗಾರರಿಂದ ಅವರಿಗೆ ಉತ್ತಮ ಸಾಥ್ ಸಿಗಲಿಲ್ಲ. ಅಂತಿಮವಾಗಿ, ಎಸ್‌ಎಸ್‌ಸಿಬಿ, 183 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನೂ ಕಳೆದುಕೊಂಡಿತು.
ಪಂಜಾಬ್ ಪರವಾಗಿ ಉತ್ತಮವಾಗಿ ಬೌಲ್ ಮಾಡಿದ ಸಂದೀಪ್ ಶರ್ಮಾ, 28 ರನ್ ನೀಡಿ ಮೂರು ವಿಕೆಟ್‌ಗಳನ್ನು ಕಬಳಿಸಿ, ಎಸ್‌ಎಸ್‌ಸಿಬಿ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದರು.
ತದನಂತರ, ತನ್ನ ಇನಿಂಗ್ಸ್ ಆರಂಭಿಸಿದ ಪಂಜಾಬ್‌ಗೆ ಇಂದರ್ ಸಿಂಗ್, ಚಂದನ್ ಮದನ್ ಇಬ್ಬರೂ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ, 35 ರನ್ ಸೇರಿಸಿತು. 9ನೇ ಓವರ್‌ನಲ್ಲಿ ಇಂದರ್ ಸಿಂಗ್ ಔಟಾದರು ಆಗ ಕ್ರೀಸ್‌ಗೆ ಕಾಲಿಟ್ಟ ಗುರ್‌ಕೀರತ್ ಸಿಂಗ್ ಅವರು ಮದನ್ ಅವರೊಂದಿಗೆ 2ನೇ ವಿಕೆಟ್‌ಗೆ 58 ರನ್ ಸೇರಿಸಿತು. 23ನೇ ಓವರ್‌ನಲ್ಲಿ ಮದನ್ ಹಾಗೂ 31ನೇ ಓವರ್‌ನಲ್ಲಿ ಗುರ್‌ಕೀರತ್ ಸಿಂಗ್ ಇಬ್ಬರೂ ಔಟಾದರು. ಆನಂತರ ಬಂದ, ಕೊಹ್ಲಿ ಹಾಗೂ ಮಾಯಾಂಕ್ ಸಿಧಾನಾ ಅವರು ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದರು. ಅಂತಿಮ ಹಂತದಲ್ಲಿ ಕೊಹ್ಲಿ ಅವರ ವಿಕೆಟ್ ಉರುಳಿದರೂ, ನಂತರ, ಬಂದ ಅಮಿತೋಜ್ ಸಿಂಗ್ ಅವರೊಂದಿಗೆ ಸಿಧಾನ ಅವರು ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಸಂಕ್ಷಿಪ್ತ ಸ್ಕೋರ್
ಸರ್ವೀಸಸ್: 183/10 (44.3 ಓವರ್)
ಪಾಲಿವಾಲ್ 96 (143), ನಕುಲ್ ವರ್ಮಾ 33 (88)
ಬೌಲಿಂಗ್: ಸಂದೀಪ್ ಶರ್ಮಾ 28/3, ತರುವಾರ್ ಕೊಹ್ಲಿ 12/2
ಪಂಜಾಬ್: 186 (45.4 ಓವರ್)
ಗುರ್‌ಕೀರತ್ ಸಿಂಗ್ 49 (82), ಸಿಧಾನಾ ಅಜೇಯ 43 (55)
ಬೌಲಿಂಗ್: ರವಿಕಾಂತ್ ಶರ್ಮಾ 41/2, ಸಕುಜಾ 27/1

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement