ಏ.19ಕ್ಕೆ ಬೆಂಚ್ ಪ್ರೆಸ್ ಸ್ಪರ್ಧೆಗೆ ಆಯ್ಕೆ
ದಾವಣಗೆರೆ: ಹರ್ಯಾಣದ ಸೂನಿಪತ್ನಲ್ಲಿ ಏಪ್ರಿಲ್ 19ರಿಂದ 21ರ ವರೆಗೆ ನಡೆಯುವ ರಾಷ್ಟ್ರ ಮಟ್ಟದ ಹಿರಿಯರ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿರುವ ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆ ಫೆ.24ರ ಬೆಳಿಗ್ಗೆ 9ರಿಂದ ದಾವಣಗೆರೆ ನಗರದ ಶ್ರೀ ಬೀರಲಿಂಗೇಶ್ವರ ವ್ಯಾಯಾಮ ಶಾಲೆಯಲ್ಲಿ ನಡೆಯಲಿದೆ. ಆಯ್ಕೆಯಾದ ಕ್ರೀಡಾಪಟುಗಳಿಗೆ ರಾಜ್ಯ ಪವರ್ ಲಿಫ್ಟಿಂಗ್ ಸಂಸ್ಥೆಯ ಪ್ರಯಾಣ ವೆಚ್ಚ ಭರಿಸುವ ಜೊತೆಗೆ ಕ್ರೀಡಾಪಟುಗಳಿಗೆ ಸಿಗುವ ಎಲ್ಲಾ ಸೌಲಭ್ಯ ದೊರಕಿಸಿ ಕೊಡಲಾಗುವುದು. ಆಸಕ್ತ ಕ್ರೀಡಾಪಟುಗಳು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಸಾಯಿನಾಥ(ಮೊ- 99029- 01522), ಗುರುಸ್ವಾಮಿ(97384- 62420), ಅಕ್ರಂಬಾಷಾ(90362- 51391)ಗೆ ಸಂಪರ್ಕಿಸುವಂತೆ ಸಂಸ್ಥೆ ಪ್ರಕಟಣೆ ಕೋರಿದೆ.
ಪಿಸ್ಟೋರಿಯಸ್ ನಿವಾಸದಲ್ಲಿ ಉದ್ದೀಪನ ಔಷಧ
ಪ್ರಿಟೋರಿಯಾ: ತನ್ನ ಪ್ರೇಯಿಸಿಯನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿರುವ 'ಬ್ಲೇಡ್ ರನ್ನರ್' ಆಸ್ಕರ್ ಪಿಸ್ಟೋರಿಯಸ್ ನಿವಾಸದಲ್ಲಿ ಸ್ಟಿರಾಯಡ್ಸ್ ಮತ್ತು ಟೆಸ್ಟ ೋಸ್ಟೋರಾನೊಂದಿಗೆ ಸೂಜಿಗಳು ಪತ್ತೆಯಾಗಿವೆ. ಪಿಸ್ಟೋರಿಯಸ್ ತನ್ನ ಗೆಳತಿಯೊಂದಿಗೆ ಒಂದು ಗಂಟೆ ಕಾಲ ವಾದ ವಿವಾದ ನಡೆಸಿದ ನಂತರ ಮೂರು ಬಾರಿ ಗಂಡು ಹಾರಿಸಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. 26 ವರ್ಷದ ಅಥ್ಲೀಟ್ ಜಾಮೀನಿಗಾಗಿ ಸಲ್ಲಿಸಿರುವ ಅರ್ಜಿ ವಿಚಾರಣೆಯ ಎರಡನೇ ದಿನ ಈ ಮಾಹಿತಿಯನ್ನು ನ್ಯಾಯಾಲಯದಲ್ಲಿ ಬಹಿರಂಗಗೊಳಿಸಲಾಗಿದೆ.