ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಮುಗ್ಗರಿಸಿದ ಸೋಮ್‌ದೇವ್

Srinivasa Murthy VN
Updated On : 20 Feb 2013, 11:59 am

ಮಾರ್ಸಿಲ್ (ಫ್ರಾನ್ಸ್): ಭಾರತದ ಟೆನಿಸ್ ತಾರೆ ಸೋಮ್‌ದೇವ್ ದೇವ್‌ವರ್ಮನ್‌ಗೆ ಸಿಂಗಲ್ಸ್ ವಿಭಾಗದಲ್ಲಿ ಇತ್ತೀಚೆಗೆ ಆರಂಭಿಕ ಸುತ್ತುಗಳಲ್ಲೇ ತಮ್ಮ ಹೋರಾಟವನ್ನು ಅಂತ್ಯಗೊಳಿಸುತ್ತಿದ್ದಾರೆ.
ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಎಟಿಪಿ ಓಪನ್‌ನ ದ್ವೀತಿಯ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬೆರಾಂಡ್ ಟಾಮಿಕ್ ವಿರುದ್ಧ ನೇರ ಸೆಟ್‌ಗಳ ಅಂತರದಿಂದ ಪರಾಭವ ಹೊಂದಿದರು. ಮೊದಲ ಸುತ್ತಿನಲ್ಲಿ ವಿಶ್ವದ ನಂ. 39ನೇ ಆಟಗಾರ ಬೆನೋಯಿಟ್ ಪೈರೆ ಅವರನ್ನು ಪರಾಭವಗೊಳಿಸಿದ್ದ ಸೋಮ್‌ದೇವ್, ದ್ವಿತೀಯ ಸುತ್ತಿನಲ್ಲಿ ವಿಶ್ವದ 46ನೇ ರ್ಯಾಂಕಿಂಗ್ ಆಟಗಾರ ಬೆನೋಯಿಟ್ ವಿರುದ್ಧ 3-6, 5-7 ನೇರ ಸೆಟ್‌ಗಳ ಅಂತರದಿಂದ ಸೋಲನುಭವಿಸಿದರು. ಮೊದಲ ಸೆಟ್‌ನಲ್ಲಿ ಕೈಚೆಲ್ಲಿದ ನಂತರ ಸೋಮ್‌ದೇವ್ ದ್ವಿತೀಯ ಸೆಟ್‌ನಲ್ಲಿ ಚತೇರಿಸಿಕೊಳ್ಳಲೇ ಇಲ್ಲ.
ದ್ವಿತೀಯ ಸೆಟ್‌ನಲ್ಲಿ ಸೋಮ್‌ದೇವ್ ಕೊಂಚ ಉತ್ತಮ ಹೋರಾಟ ನಡೆಸಿದರಾದರೂ, ಮೇಲುಗೈಸಾಧಿಸುವಲ್ಲಿ ವಿಫಲವಾದರು. ಮೊದಲ ಸೆಟ್ ಗೆದ್ದ ಸೋಮ್‌ಗೆ 20 ರ್ಯಾಂಕಿಂಗ್ ಪಾಯಿಂಟ್‌ಗಳು ದೊರಕಿದವು.
ಏತನ್ಮಧ್ಯೆ, ಭಾರತದ ರೋಹನ್ ಬೋಪಣ್ಣ ಅವರು ತಮ್ಮ ಜತೆಯಾಟಗಾರ ಇಂಗ್ಲೆಂಡ್ ಕಾಲಿನ್ ಫ್ಲೆಮಿಂಗ್ ಅವರೊಂದಿಗೆ ಕ್ವಾರ್ಟರ್‌ಪೈನಲ್ ಪ್ರವೇಶಿಸಿದ್ದು, ಪಂದ್ಯಾವಳಿಯಲ್ಲಿ ಭಾರತದ ಸವಾಲು ಇನ್ನೂ ಮುಕ್ತಾಯಗೊಂಡಿಲ್ಲ. ಮೊದಲ ಸುತ್ತಿನಲ್ಲಿ ಭಾರತ- ಇಂಗ್ಲೆಂಡ್ ಜೋಡಿ, ರಾಬಿನ್ ಹಾಸೆ ಮತ್ತು ಡಿಕ್ ನಾರ್ಮನ್ ಜೋಡಿಯನ್ನು 6-4, 6-2 ಸೆಟ್‌ಗಳ ಂತರದಿಂದ ಸೋಲಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement