ಇಂದಿನಿಂದ ಕ್ರಿಕೆಟ್ ಯುದ್ಧ
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕು ಟೆಸ್ಟ್ ಸರಣಿ ಪೈಕಿ ಮೊದಲ ಟೆಸ್ಟ್ ಚೆನ್ನೈನಲ್ಲಿ ಶುಕ್ರವಾರದಿಂದ ಶುರು.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕು ಟೆಸ್ಟ್ ಸರಣಿ ಪೈಕಿ ಮೊದಲ ಟೆಸ್ಟ್ ಚೆನ್ನೈನಲ್ಲಿ ಶುಕ್ರವಾರದಿಂದ ಶುರು. ಟೆಸ್ಟ್ ರ್ಯಾಂಕಿಂಗ್ನಲ್ಲಿ ದಕ್ಷಿಣ ಆಫ್ರಿಕ ಅಗ್ರ ಸ್ಥಾನದಲ್ಲಿದೆ. ಇಂಗ್ಲೆಂಡ್ (118 ಅಂಕ) ದ್ವಿತೀಯ ಸ್ಥಾನ, ಆಸ್ಟ್ರೇಲಿಯಾ (117 ಅಂಕ) ತೃತೀಯ ಸ್ಥಾನ, ಪಾಕಿಸ್ಥಾನ (109 ಅಂಕ) ನಾಲ್ಕನೇ ಸ್ಥಾನ, ಭಾರತ (109 ಅಂಕ) ಐದನೇ ಸ್ಥಾನದಲ್ಲಿದೆ.
ಸ್ಥಾನ ಭದ್ರ ಹೇಗೆ?
- ಆಸೀಸ್ ವಿರುದ್ಧ ಸರಣಿಯನ್ನು 4-0 ಅಂತರದಿಂದ ಗೆದ್ದರೆ ಭಾರತ ಟೆಸ್ಟ್ ರ್ಯಾಂಕಿಂಗ್ನಲ್ಲಿ 3ನೇ ಸ್ಥಾನಕ್ಕೆ ಏರಬಹುದು.
- ಕನಿಷ್ಠ 1-0 ಅಂತರದಿಂದ ಗೆದ್ದರೆ ಮೂರನೇ ಸ್ಥಾನಕ್ಕೆ ಏರುತ್ತದೆ.
- ಭಾರತ ವಿರುದ್ಧ ಆಸೀಸ್ 2-0ಯಿಂದ ಟೆಸ್ಟ್ ಸರಣಿ ಗೆದ್ದರೆ ತಂಡಕ್ಕೆ ದ್ವಿತೀಯ ಸ್ಥಾನ.
100ನೇ ಟೆಸ್ಟ್
ಭಾರತೀಯ ಕ್ರಿಕೆಟ್ ತಂಡದ ಸ್ಪಿನ್ನರ್ ಹರ್ಭಜನ್ ಸಿಂಗ್ ಆಸ್ಟ್ರೇಲಿಯಾ ವಿರುದ್ಧ ತಮ್ಮ 100ನೇ ಟೆಸ್ಟ್ ಆಡಲಿದ್ದಾರೆ.