ನಾಕೌಟ್ಗೆ ವಿನಯ್ ಕುಮಾರ್ ನಾಯಕತ್ವ
ಬೆಂಗಳೂರು: ಫೆ.26 ರಿಂದ ಮಾ.3ರ ವರೆಗೆ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿಯ ನಾಕೌಟ್ ಹಂತಕ್ಕೆ ಕರ್ನಾಟಕ ತಂಡ ಪ್ರಕಟಿಸಲಾಗಿದ್ದು, ಆರ್. ವಿನಯ್ ಕುಮಾರ್ಗೆ ನಾಯಕತ್ವ ವಹಿಸಲಾಗಿದೆ. ದಕ್ಷಿಣ ವಲಯ ಪಂದ್ಯಗಳ ಸಮಯದಲ್ಲಿ ಭಾರತ ಎ ತಂಡದಲ್ಲಿ ಸ್ಥಾನ ಪಡೆದಿದ್ದ ವಿನಯ್ ರಾಜ್ಯ ತಂಡಕ್ಕೆ ಅಲಭ್ಯರಾಗಿದ್ದರು. ಹೀಗಾಗಿ ಸ್ಟುವರ್ಟ್ ಬಿನ್ನಿಗೆ ತಂಡದ ಸಾರಥ್ಯ ನೀಡಲಾಗಿತ್ತು. ತಂಡದಲ್ಲಿ ಮೂರು ಬದಲಾವಣೆಯನ್ನು ಮಾಡಲಾಗಿದ್ದು, ಕೆ.ಸಿ. ಅವಿನಾಶ್, ರಾಜೂ ಭಟ್ಕಳ್ ಮತ್ತು ರಾಯನ್ ನಿನಾನ್ ಬದಲಿಗೆ, ಆರ್.ವಿನಯ್ ಕುಮಾರ್, ಸಿ.ಎಂ.ಗೌತಮ್ ಮತ್ತು ಜೆ.ಸುಚಿತ್ ಅವರನ್ನು ಆಯ್ಕೆ ಮಾಡಲಾಗಿದೆ. ತಂಡ: ಆರ್.ವಿನಯ್ ಕುಮಾರ್ (ನಾಯಕ), ಸ್ಟುವರ್ಟ್ ಬಿನ್ನಿ (ಉಪ ನಾಯಕ), ರಾಬಿನ್ ಉತ್ತಪ್ಪ, ಕೆ.ಎಲ್.ರಾಹುಲ್, ಗಣೇಶ್ ಸತೀಶ್, ಮನೀಶ್ ಪಾಂಡೆ, ಸಿ.ಎಂ.ಗೌತಮ್, ಅಮಿತ್ ವರ್ಮಾ, ಕರುಣ್ ನಾಯರ್, ಅಭಿಮನ್ಯು ಮಿಥುನ್, ಕೆ.ಪಿ.ಅಪ್ಪಣ್ಣ, ಎಸ್.ಎಲ್.ಅಕ್ಷಯ್, ಎಚ್.ಎಸ್.ಶರತ್, ಮಾಯಾಂಕ್ ಅಗರ್ವಾಲ್, ಜೆ.ಸುಚಿತ್