ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ನಾಳೆಯಿಂದ ಸಂತೋಷ್ ಟ್ರೋಫಿ ನಾಕೌಟ್

Srinivasa Murthy VN
Updated On : 22 Feb 2013, 1:08 am

ಕೊಚ್ಚಿ: ಐ- ಲೀಗ್ ಆಟಗಾರರು ಸಂತೋಷ್ ಟ್ರೋಫಿಯಲ್ಲಿ ಆಡಬಾರದು ಎಂದು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್‌ಎಫ್) ತಡೆಯೊಡ್ಡಿರುವ ಹಿನೆಢಿಲೆಯಲ್ಲಿ, ಅಭಿಮಾನಿಗಳನ್ನು ಆಕರ್ಷಿಸಲು ಆಯೋಜಕರು ಪರದಾಡತ್ತಿದ್ದಾರೆ. ಏತನ್ಮಧ್ಯೆ, ಕ್ವಾರ್ಟರ್‌ಫೈನಲ್ ಪಂದ್ಯಗಳು ಶುಕ್ರವಾರದಿಂದ ಆರಂಭವಾಗಲಿವೆ.
ಇತ್ತೀಚೆಗಷ್ಟೇ ಪೆಲೆಸ್ತಿನ್ ಮತ್ತು ಭಾರತದ ನಡುವೆ ಅಂತಾರಾಷ್ಟ್ರೀಯ ಫಟ್ಬಾಲ್ ಪಂದ್ಯ ಕೇರಳದಲ್ಲೇ ನಡೆದರೂ, ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಅಭಿಮಾನಿಗಳ ಆಕರ್ಷಣೆ ನೀರಸವಾಗಿದೆ.
ಕರ್ನಾಟಕ ಫುಟ್ಬಾಲ್ ತಂಡ ಸಹ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದು, ಶನಿವಾರ ತನ್ನ ಮೊದಲ ಪಂದ್ಯದಲ್ಲಿ ಪಶ್ಚಿಮ ಬಂಗಾಳ ವಿರುದ್ಧ ಸೆಣಸಲಿದೆ. ನಂತರ ಸೋಮವಾರ ಮಣಿಪುರ ಮತ್ತು ಬುಧವಾರ ಪಂಜಾಬ್ ವಿರುದ್ಧ ಹೋರಾಡಲಿದೆ.

ತನಿಖೆಗೆ ಸಹಕರಿಸಲುಆರ್ಮ್‌ಸ್ಟ್ರಾಂಗ್ ನಕಾರ
ವಾಶಿಂಗ್ಟನ್: ಉದ್ದೀಪನ ಮದ್ದು ಸೇವನೆಯಿಂದ ಅಪರಾಧಿ ಸ್ಥಾನದಲ್ಲಿರುವ ಖ್ಯಾತ ಸೈಕ್ಲಿಸ್ಟ್ ಲ್ಯಾನ್ಸ್ ಆರ್ಮ್‌ಸ್ಟ್ರಾಂಗ್, ಯುಎಸ್ ಡೋಪಿಂಗ್ ನಿಗ್ರಹ ಸಂಸ್ಥೆ ನಡೆಸುತ್ತಿರುವ ತನಿಖೆಗೆ ಸಹಕರಿಸಲು ನಿರಾಕರಿಸಿದ್ದಾರೆ. ಆದರೆ, ಇತರೆ ಡೋಪಿಂಗ್ ನಿಗ್ರಹ ಸಂಸ್ಥೆಗಳ ತನಿಖೆಗೆ ಸಹಕರಿಸಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ. ಹಲವಾರು ಕಾರಣಗಳಿಂದ ಲ್ಯಾನ್ಸ್ ಯುಎಸ್ ಡೋಪಿಂಗ್ ನಿಗ್ರಹ ಸಂಸ್ಥೆ ತನಿಖೆಗೆ ಸಹಕರಿಸದಿರಲು ನಿರ್ಧರಿಸಿದ್ದಾರೆ. ಯುಎಸ್ ಡೋಪಿಂಗ್ ನಿಗ್ರಹ ಸಂಸ್ಥೆಗೆ ವಿಶ್ವದ ಶೇ. 95ರಷ್ಟು ಕ್ರೀಡೆಗಳಲ್ಲಿ ತನಿಖೆ ನಡೆಸುವ ಅಧಿಕಾರವಿಲ್ಲ, ಹಾಗೆಯೇ ಅಮೆರಿಕಾದ ಈ ಏಜೆನ್ಸಿ ಕೇವಲ ಆಯ್ದ ವ್ಯಕ್ತಿಗಳ ಮೇಲೆ ಮಾತ್ರ ತನಿಖೆ ನಡೆಸುತ್ತದೆ ಎಂದು ಆರ್ಮ್‌ಸ್ಟ್ರಾಂಗ್ ಪರ ವಕೀಲರು ತಮ್ಮ ಹೇಳಿಕೆಯ ಮೂಲಕ ತಿಳಿಸಿದ್ದಾರೆ. ಲಾನ್ಸ್ ಆರ್ಮ್‌ಸ್ಟ್ರಾಂಗ್ ಬೇರೆ ಆ್ಯಂಟಿ ಡೋಪಿಂಗ್ ಎಜೆನ್ಸಿ ನಡೆಸುವ ತನಿಖೆಗೆ ಸಂಪೂರ್ಣವಾಗಿ ಸಹಕರಿಸಲು ಒಪ್ಪಿದ್ದು, ಅವರು ಕೇಳುವ ಪ್ರತಿ ಪ್ರಶ್ನೆಗೂ ಉತ್ತರಿಸಲು ಸಿದ್ಧರಿರುವುದಾಗಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ವಿಶ್ವ ಹಾಕಿ ಲೀಗ್ ಬಹುಮಾನ ಪ್ರಕಟ
ನವದೆಹಲಿ: ಎರಡನೇ ಸುತ್ತಿನ ವಿಶ್ವ ಹಾಕಿ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ನಗದು ಬಹುಮಾನ ಪ್ರಕಟವಾಗಿದೆ. ಪಂದ್ಯಾವಳಿಯ ಪ್ರಮುಖ ಪ್ರಾಯೋಜಕರಾಗಿರುವ ಹೀರೋ ಮೊಟೊಕಾರ್ಪ್ ಪಂದ್ಯಾವಳಿ ಶ್ರೇಷ್ಠ ಹಾಗೂ ಹೆಚ್ಚು ಗೋಲು ದಾಖಲಿಸಿದ ಮಹಿಳಾ ಹಾಗೂ ಪುರುಷ ಆಟಗಾರರಿಗೆ ನಗದು ಬಹುಮಾನವನ್ನು ಪ್ರಕಟಿಸಿದೆ.
ಪಂದ್ಯಾವಳಿ ಶ್ರೇಷ್ಠ ಆಟಗಾರರಿಗೆ ರು. 2 ಲಕ್ಷ ಹಾಗೂ ಹೆಚ್ಚು ಗೋಲು ದಾಖಲಿಸಿದ ಆಟಗಾರರಿಗೆ ರು. 1 ಲಕ್ಷ ಬಹುಮಾನ ನೀಡಲು ನಿರ್ಧರಿಸಲಾಗಿದೆ ಎಂದು ಆಯೋಜಕರುತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement