ರ್ಯಾಂಕಿಂಗ್: ಕಶ್ಯಪ್‌ಗೆ ಹಿಂಬಡ್ತಿ, ಯಥಾ 2ನೇ ಸ್ಥಾನದಲ್ಲಿ ಸೈನಾ
ನವದೆಹಲಿ: ಭಾರತದ ಬ್ಯಾಡ್ಮಿಂಟನ್ ತಾರೆ ಪುರುಪಳ್ಳಿ ಕಶ್ಯಪ್ ಅವರು ವಿಶ್ವ ರ್ಯಾಂಕಿಂಗ್‌ನಲ್ಲಿ ಟಾಪ್ 10 ಪಟ್ಟಿಯಿಂದ ಹೊರಬಿದ್ದಿದ್ದಾರೆ. ಆದರೆ, ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಸೈನಾ ನೆಹ್ವಾಲ್, ಯಥಾ 2ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಲಂಡನ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದ ಕಶ್ಯಪ್, ಕಳೆದ ತಿಂಗಳಷ್ಟೇ 9ನೇ ಸ್ಥಾನಕ್ಕೇರಿದ್ದರು. ಮೂರು ವಾರಗಳ ಕಾಲ 9ನೇ ಸ್ಥಾನದಲ್ಲಿ ಮುಂದುವರಿದಿದ್ದರು. ಆದರೆ, ಈಗ 2 ಸ್ಥಾನ ಹಿಂಬಡ್ತಿ ಪಡೆದಿರುವ ಕಶ್ಯಪ್ ಅವರು 11ನೇ ಸ್ಥಾನಕ್ಕೆ ಜಾರಿದ್ದಾರೆ. ಕಳೆದ ಒಂದು ತಿಂಗಳಿಂದ ಕಶ್ಯಪ್ ಅವರು ಯಾವುದೇ ಪಂದ್ಯಾವಳಿಯಲ್ಲಿ ಭಾಗವಹಿಸಿಲ್ಲ. ಇದರ ಲಾಭ ಪಡೆದ ವೀಯಟ್ನಾಂನ ಟೀನ್ ಮಿನ್ಹಾ ಗುಯೇನ್ 9ನೇ ಸ್ಥಾನಕ್ಕೇರಿದರೆ, ಡೆನ್ಮಾರ್ಕ್ ಜಾನ್ ಓ ಜಾರ್ಗನ್ಸನ್ 10ನೇ ಸ್ಥಾನಕ್ಕೇರಿದ್ದಾರೆ. ಇನ್ನು ಟಾಪ್ 20ಯಲ್ಲಿ ಸ್ಥಾನ ಪಡೆದಿದ್ದ ಉದಯೋನ್ಮುಖ ಮಹಿಳಾ ಟೆನಿಸ್ ತಾರೆ ಪಿ. ವಿ ಸಿಂಧು, ಸಿಂಗಲ್ಸ್‌ನಲ್ಲಿ 16ನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಅಜಯ್ ಜಯರಾಮ್ ಅವರು 1 ಸ್ಥಾನ ಹಿಂಬಡ್ತಿ ಪಡೆದು 32ನೇ ಸ್ಥಾನದಲ್ಲಿದ್ದಾರೆ. ಇನ್ನು ಆರ್‌ಎಂವಿ ಗುರುಸಾಯಿದತ್ ಅವರು 1 ಸ್ಥಾನ ಬಡ್ತಿ ಪಡೆದು 37ನೇ ಸ್ಥಾನದಲ್ಲಿದ್ದಾರೆ.