ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ರ್ಯಾಂಕಿಂಗ್‌ನಲ್ಲಿ ಬಡ್ತಿಗಾಗಿ ಸೆಣಸಾಟ

Srinivasa Murthy VN
Updated On : 22 Feb 2013, 1:07 am

ಚೆನೈ: ಪ್ರಸಕ್ತ ಸಾಲಿನ ಟೆಸ್ಟ್ ಚಾಂಪಿಯನ್‌ಷಿಪ್ ದಕ್ಷಿಣ ಆಫ್ರಿಕಾದ ಪಾಲಾಗಿದ್ದರು, ನಂತರದ ಸ್ಥಾನ ಗಳಿಸುವ ತಂಡಗಳು   ಉತ್ತಮ ಸಂಭಾವನೆ ಪಡೆಯುವ ಕಾರಣ, ಈ ಸ್ಥಾನಗಳಿಗಾಗಿ ಉಳಿದ ತಂಡಗಳು ಕಾದಾಟ ನಡೆಸಲು ತಯಾರಿ ನಡೆಸಿವೆ. ಹೀಗಾಗಿ  ಭಾರತ ಹಾಗೂ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮಹತ್ವ ಪಡೆದುಕೊಂಡಿವೆ.
ಏ.1ರ ಒಳಗಿನ ಟೆಸ್ಟ್ ಸರಣಿಗಳ ಫಲಿತಾಂಶಗಳ ಆಧಾರದ ಮೇಲೆ ಪ್ರಸಕ್ತ ಸಾಲಿನ ಟೆಸ್ಟ್ ಚಾಂಪಿಯನ್‌ಷಿಪ್ ನಿಗದಿಯಾಗಲಿದ್ದು, ಈಗಾಗಲೇ ಉಳಿದ ತಂಡಗಳಿಗಿಂತ ಹೆಚ್ಚು ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಚಾಂಪಿಯನ್‌ಷಿಪ್ ಅನ್ನು ತನ್ನದಾಗಿಸಿಕೊಂಡು 2.50 ಕೋಟಿ ತನ್ನದಾಗಿಸಿಕೊಂಡಿದೆ.
ಉಳಿದಂತೆ ದ್ವಿತೀಯ ಸ್ಥಾನ ಪಡೆಯುವ ತಂಡ 1.91 ಕೋಟಿಯನ್ನು ಪಡೆದರೆ, ತೃತಿಯ ಸ್ಥಾನಕ್ಕೆ 1.36 ಕೋಟಿ ಪಡೆಯಲಿದೆ. ಇನ್ನು ನಾಲ್ಕನೇ ಸ್ಥಾನ ಪಡೆದ ತಂಡ ರು. 80 ಲಕ್ಷ ಪಡೆಯಲಿದೆ.
ಟೆಸ್ಟ್ ಚಾಂಪಿಯನ್‌ಷಿಪ್‌ನ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ದಕ್ಷಿಣ ಆಫ್ರಿಕಾ ತಂಡ ಖಚಿತ ಪಡಿಸಿಕೊಂಡಿದ್ದು, ಉಳಿದ ಸ್ಥಾನಗಳಿಗೆ ಪ್ರಬಲ ಪೈಪೋಟಿ ಎದುರಾಗಲಿದೆ. ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಶುಕ್ರವಾರದಿಂದ ಆರಂಭವಾದರೆ, ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವೆ  ಮೂರು ಟೆಸ್ಟ್ ಪಂದ್ಯಗಳ ಸರಣಿ ಮಾ.6 ರಿಂದ ಆರಂಭವಾಗಲಿದೆ.  ಪ್ರಸ್ತುತ ಅಂಕಪಟ್ಟಿಯಲ್ಲಿ 118 ಅಂಕಗಳನ್ನು ಪಡೆದಿರುವ ಇಂಗ್ಲೆಂಡ್ ತಂಡ ದ್ವಿತೀಯ ಸ್ಥಾನದಲ್ಲಿದ್ದರೆ, 117 ಅಂಕಗಳನ್ನು ಪಡೆದಿರುವ ಆಸೀಸ್ ತಂಡ ಮೂರನೇ ಸ್ಥಾನದಲ್ಲಿದೆ. ಇನ್ನು ಪಾಕಿಸ್ತಾನ ತಂಡ 109 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರೇ, ಭಾರತ ತಂಡ 105 ಅಂಕಗಳೊಂದಿಗೆ 5ನೆ ಸ್ಥಾನದಲ್ಲಿದೆ. ಹೀಗಾಗಿ ಮುಂಬರುವ ಎರಡು ಟೆಸ್ಟ್ ಸರಣಿಯಿಂದ ಅಂಕಪಟ್ಟಿಯಲ್ಲಿ ಯಾವ ಸ್ಥಾನವನ್ನು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.
ಭಾರತದ ಸ್ಥಿತಿ: ಭಾರತ ತಂಡ ಅಂಕ ಪಟ್ಟಿಯಲ್ಲಿ ಬಹಳ ಕಡಿಮೆ ಅಂಕಗಳನ್ನು ಗಳಿಸಿದ್ದು, ಆಸ್ಟ್ರೇಲಿಯಾ  ವಿರುದ್ಧದ ಸರಣಿಯಲ್ಲಿ ಉತ್ತಮ ಅಂತರದಲ್ಲಿ ಗೆಲುವು ಸಾಧಿಸಿದಾಗ ಮಾತ್ರ ಭಾರತ ತಂಡ ಪಾಕಿಸ್ತಾನಕ್ಕಿಂತ ಉನ್ನತ ಸ್ಥಾನಗಳಿಸಿ ನಾಲ್ಕನೇ ಸ್ಥಾನ ಗಳಿಸಬಹುದಾಗಿದೆ. ಆದರೆ ಭಾರತಕ್ಕಿಂತ 12 ಅಂಕಗಳ ಮುನ್ನಡೆ  ಹೊಂದಿರುವ ಕಾಂಗರೂ ಪಡೆ ಈ ಸರಣಿಯನ್ನು 2-0 ಅಂತರದಲ್ಲಿ ಜಯಿಸಿದರೆ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆಯುವ ಅವಕಾಶವಿದೆ.
ಆದರೆ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್ ಪಟ್ಟಿಯ ಅಗ್ರ 20 ಸ್ಥಾನಗಳಲ್ಲಿ ಭಾರತದ ಸಚಿನ್ 20ನೇ ಸ್ಥಾನದಲ್ಲಿದ್ದು ಉಳಿದ ಬ್ಯಾಟ್ಸ್‌ಮನ್‌ಗಳು ನಂತರದ ಸ್ಥಾನಗಳಲ್ಲಿದ್ದಾರೆ. ಆದರೆ ರ್ಯಾಂಕಿಂಗ್ ಪಟ್ಟಿಯಲ್ಲಿ ಆಸೀಸ್‌ನ ನಾಯಕ ಮೈಕಲ್ ಕ್ಲಾರ್ಕ್ 2ನೇ ಸ್ಥಾನದಲ್ಲಿರುವುದನ್ನು ಹೊರತು ಪಡಿಸಿದರೆ ಉಳಿದ ಯಾವುದೇ ಬ್ಯಾಟ್ಸ್‌ಮನ್‌ಗಳು ಅಗ್ರ 20 ಸ್ಥಾನಗಳಲ್ಲಿಲ್ಲ.
ಇನ್ನು ಅಂಕಪಟ್ಟಿಯಲ್ಲಿ ಎರಡೂ ತಂಡಗಳ ಬೌಲರ್‌ಗಳ ಪರಿಸ್ಥಿತಿಯೂ ಸಹ ಒಂದೇ ರೀತಿ ಇದೆ. ಆಸೀಸ್‌ನ ಪೀಟರ್ ಸಿಡ್ಲ್ 5ನೇ ಸ್ಥಾನದಲ್ಲಿದ್ದರೆ, ಭಾರತದ ಪ್ರಗ್ಯಾನ್ ಓಜಾ 8ನೇ ಸ್ಥಾನದಲ್ಲಿದ್ದಾರೆ. ಮಿಚೆಲ್ ಜಾನ್ಸನ್ 18ನೇ ಸ್ಥಾನದಲ್ಲಿದ್ದರೆ, ಅಶ್ವಿನ್ 20ನೇ ಸ್ಥಾನದಲ್ಲಿದ್ದಾರೆ. ಇನ್ನು ಹರ್ಭಜನ್ ಹಾಗೂ ನಾಥನ್ ಲಿಯೊನ್ ಜಂಟಿ 25ನೇ ಸ್ಥಾನದಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement