ವಾಲಿಬಾಲ್ ಫೆಡರೇಷನ್‌ಕಪ್: ರಾಜ್ಯ ತಂಡ ಆಯ್ಕೆ
ಬೆಂಗಳೂರು: ಫೆ.24 ರಿಂದ ಫೆ.3ರ ವರೆಗೆ ಕೇರಳದ ಪತಿನಂತಿಟ್ಟದಲ್ಲಿ ನಡೆಯಲಿರುವ ಫೆಡರೇಷನ್ ಕಪ್ ವಾಲಿಬಾಲ್ ಚಾಂಪಿಯನ್‌ಷಿಪ್‌ಗೆ ರಾಜ್ಯ ತಂಡ ಪ್ರಕಟಿಸಲಾಗಿದೆ.
12 ಆಟಗಾರರ ತಂಡವನ್ನು ಆಯ್ಕೆ ಮಾಡಿರುವ ಆಯ್ಕೆ ಸಮಿತಿ, ಟಿ.ಡಿ ರವಿಕುಮಾರ್‌ಗೆ ನಾಯಕ ಪಟ್ಟ ನೀಡಿದ್ದು, ಅನುಪ್ ಡಿ ಕೊಸ್ಟಾ ಅವರನ್ನು ಉಪನಾಯಕನನ್ನಾಗಿ ಆಯ್ಕೆ ಮಾಡಿದೆ.
ಈ ತಂಡ ಗುರುವಾರ ಕೇರಳದ ಪತಿನಂತಿಟ್ಟಕ್ಕೆ ಪ್ರಯಾಣ ಬೆಳೆಸಿದ್ದು, ಪಂದ್ಯಾವಳಿಯ ಬಿ ಗುಂಪಿನಲ್ಲಿ ತಮಿಳುನಾಡು, ಉತ್ತರಖಂಡ್ ಮತ್ತು ಪಂಜಾಬ್ ವಿರುದ್ಧ ಸೆಣೆಸಲಿದೆ. ಕರ್ನಾಟಕ ತಂಡ ತಮ್ಮ ಮೊದಲ ಪಂದ್ಯವನ್ನು ಫೆ.25 ರಂದು ತಮಿಳುನಾಡಿನ ವಿರುದ್ಧ ಆಡಲಿದೆ.
ತಂಡ: ಟಿ.ಡಿ ರವಿಕುಮಾರ್ (ನಾಯಕ), ಅನುಪ್ ಡಿ ಕೊಸ್ಟಾ (ಉಪನಾಯಕ), ಕಾರ್ತಿಕ್ ಎ, ಸುಜಿತ್ ಎ, ವಿನಾಯಕ್, ನವೀನ್ ಕುಮಾರ್, ಶ್ರವಣ್ ಯಾದವ್, ಮಾರುತಿ ಜಿ ನಾಯಕ್, ಮಂಜುನಾಥ್, ಸೂರಜ್ ಜಿ ನಾಯಕ್, ನಾಗೇಶ್ ಎಂ.ವಿ, ಭರತ್ ಬಿ.