ಸಚಿವಾಲಯಹೊಸ ಗಡವು
ನವದೆಹಲಿ: ದೇಶದ ಎಲ್ಲಾ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳು ತನ್ನ ಕ್ರೀಡಾ ನೀತಿಯ ಅನುಸಾರವಾಗಿ ತಮ್ಮ ಸಂವಿಧಾನದಲ್ಲಿ ತಿದ್ದುಪಡಿ ಮಾಡುವಂತೆ ಸೂಚನ ನೀಡಿದ್ದು, ಈ ತಿದ್ದುಪಡಿ ಮಾಡಲು ಹೊಸ ಗಡುವು ನೀಡಿದೆ. ಎಲ್ಲಾ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳು ಫೆ.28ರ ಒಳಗಾಗಿ ಕ್ರೀಡಾ ನೀತಿಯ ಅನ್ವಯ ತಮ್ಮ ಸಂವಿಧಾನದಲ್ಲಿ ತಿದ್ದುಪಡಿ ತರಬೇಕು. ಇಲ್ಲವಾದರೆ, ಸರ್ಕಾರಿ ಮಾನ್ಯತೆ ಮೇಲೆ ಪರಿಣಾಮ ಬೀರಲಿದೆ ಎಂದು ಕ್ರೀಡಾ ಸಚಿವಾಲಯ ತಿಳಿಸಿದೆ. ಇದುವರೆಗೂ ದೇಶದ 53 ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳು ಮಾನ್ಯತೆಪಡೆದಿವೆ. ಅದರಲ್ಲಿ 29 ಕ್ರೀಡಾ ಸಚಿವಾಲಯದ ಪತ್ರಕ್ಕೆ ಧನಾತ್ಮಕವಾ ಸ್ಪಂಧಿಸಿ ತಮ್ಮ ಸಂವಿಧಾನದಲ್ಲಿ ತಿದ್ದುಪಡಿ ತಂದಿವೆ. ಬುಧವಾರ ಎಲ್ಲಾ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಿಗೂ ಹೊಸ ಪತ್ರವನ್ನು ಕಳುಹಿಸಿರುವ ಕ್ರೀಡಾ ಸಚಿವಾಲಯ, ತಿದ್ದುಪಡಿ ಮಾಡದ ಫೆಡರೇಷನ್‌ಗಳಿಗೆ ಫೆ.28ರ ಗಡುವು ನೀಡಿದೆ.