ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಏಪ್ರಿಲ್‌ನಲ್ಲಿ ಭಾರತ-ಪಾಕ್ ಸ್ನೂಕರ್ ಸರಣಿ

Srinivasa Murthy VN
Updated On : 23 Feb 2013, 9:43 am

ಕರಾಚಿ: ಭಾರತ ಹಾಗೂ ಪಾಕಿಸ್ತಾನದ ನಡುವಿನ ಕ್ರೀಡಾ ಸಂಬಂಧ ಮುಂದುವರಿಸಲು ಪಾಕಿಸ್ತಾನ ಪ್ರಯತ್ನಿಸುತ್ತಿದ್ದು, ಈ ಎರಡೂ ದೇಶಗಳ ನಡುವೆ ಏ.1 ರಿಂದ 7ರವರೆಗೆ ಸ್ನೂಕರ್ ಸರಣಿ ನಡೆಸಲಿದೆ. ಈ ಸರಣಿಗೆ ಭಾರತ ಕೂಡ ಒಪ್ಪಿಗೆ ಸೂಚಿಸಿರುವುದಾಗಿ ಪಾಕಿಸ್ತಾನ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಫೆಡರೇಷನ್ (ಪಿಬಿಎಸ್‌ಎಫ್) ತಿಳಿಸಿದೆ. ಈಗಾಗಲೇ ಭಾರತ ಈ ಸರಣಿಯಲಿ ಭಾಗವಹಿಸಲಿರುವ ನಾಲ್ವರು ಆಟಗಾರರ ಹೆಸರನ್ನು ಕಳುಹಿಸಿದೆ. ಈ ಸರಣಿಗೆ ಕಮಲ್ ಚಾವ್ಲಾ, ಬ್ರಿಜೇಶ್ ವದ್ವಾನಿ, ಲಕ್ಕಿ ವಾಲಾವತಿ ಮತ್ತು ರಿಫತ್ ಹಬೀಬ್ ಅವರು ಭಾಗವಹಿಸಲಿದ್ದಾರೆ ಎಂದು ಪಿಬಿಎಸ್‌ಎಫ್ ಅಧ್ಯಕ್ಷ ಅಲಂಗಿರ್ ಶೇಖ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement