ಏಷ್ಯನ್ ಸ್ಕ್ವಾಷ್: ಫೈನಲ್ಗೆ ಭಾರತ
ಸಿಯೋಲ್: ಆಕರ್ಷಕ ಪ್ರದರ್ಶನ ಮುಂದುವರಿಸಿರುವ ಭಾರತದ ಬಾಲಕ ಮತ್ತು ಬಾಲಕಿಯರ ತಂಡಗಳು 16ನೇ ಏಷ್ಯನ್ ಜೂನಿಯರ್ ಸ್ಕ್ವಾಷ್ ಚಾಂಪಿಯನ್ಷಿಪ್ನ ಫೈನಲ್ ಪ್ರವೇಶಿಸಿವೆ. ಭಾರತದ ಬಾಲಕ ಮತು ಬಾಲಕಿಯರ ತಂಡಗಳು ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶಿಸಿರುವುದು ಇದು 2ನೇ ಬಾರಿಯಾಗಿದೆ. ಈ ಹಿಂದೆ 2003ರಲ್ಲಿ ಪಾಕಿಸ್ತಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ಭಾರತ ತಂಡಗಳು ಫೈನಲ್ ಪ್ರವೇಶಿಸಿದ್ದವು.
ಬಾಲಕರ ತಂಡ ಸೆಮಿಫೈನಲ್ನಲ್ಲಿ ಹಾಂಕಾಂಗ್ ವಿರುದ್ಧ 3-1 ಅಂತರದಿಂದ ಜಯ ಸಾಧಿಸಿದರೆ, ಬಾಲಕಿಯರ ತಂಡ ಮಲೇಷ್ಯಾ ವಿರುದ್ಧ 2-1 ಅಂತರದಿಂದ ಜಯ ಸಾಧಿಸಿತು.
ಫೈನಲ್ ಪಂದ್ಯದಲ್ಲಿ ಭಾರತತಂಡ ಅಗ್ರ ಸೀಡ್ ಪಡೆದಿರುವ ಪಾಕಿಸ್ತಾನವನ್ನು ಎದುರಿಸಿದರೆ, ಬಾಲಕಿಯರ ತಂಡ ಹಾಂಕಾಂಗ್ ವಿರುದ್ಧ ಸೆಣಸಲಿದೆ.