ಭಾರತಕ್ಕೆ ಮತ್ತೊಂದು ಗೆಲುವು
ನವದೆಹಲಿ: ವಿಶ್ವ ಹಾಕಿ ಲೀಗ್ನಲ್ಲಿ ತನ್ನ ಜಯದ ಅಭಿಯಾನವನ್ನು ಮುಂದುವರೆಸಿರುವ ಭಾರತ ಪುರುಷರ ಹಾಕಿ ತಂಡ, ಶನಿವಾರ ಮತ್ತೊಂದು ಜಯ ಪಡೆಯಿತು.
ಚೀನಾ ವಿರುದ್ಧದ ಪಂದ್ಯದಲ್ಲಿ ಭಾರತ 0-4 ಗೋಲುಗಳ ಅಂತರದಲ್ಲಿ ಜಯ ಗಳಿಸಿತು.
ಭಾರತ ತಂಡದ ಉಪ ನಾಯಕ ವಿ.ಆರ್. ರಘುನಾಥ್ ಅವರು ಪಂದ್ಯದ 12ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ತಂಡಕ್ಕೆ ಮೊದಲ ಗೋಲು ಗಳಿಸಿಕೊಟ್ಟರು.
ಆನಂತರ, ರಘುನಾಥ್ ಅವರೇ ಪಂದ್ಯದ 28ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿ, ಭಾರತಕ್ಕೆ 2-0ಯ ಮುನ್ನಡೆ ತಂದುಕೊಟ್ಟರು.
ಅತ್ತ, ಚೀನಾದ ಕಡೆಯಿಂದ ಈ ಹಂತದಲ್ಲಿ ಯಾವುದೇ ಆಕ್ರಮಣಕಾರಿ ಆಟ ಮೂಡಿ ಬರಲಿಲ್ಲ.
ಏತನ್ಮಧ್ಯೆ, ಭಾರತದ ಧರಮ್ವೀರ್ ಸಿಂಗ್ ಅವರು, ಪಂದ್ಯದ 39ನೇ ನಿಮಿಷದಲ್ಲಿ ಭಾರತಕ್ಕೆ ಮೂರನೇ ಗೋಲು ದಾಖಲಿಸಿಕೊಟ್ಟರು.
ಆನಂತರ, ರೂಪಿಂದರ್ ಪಾಲ್ ಸಿಂಗ್ ಅವರು ಪಂದ್ಯದ 43ನೇ ನಿಮಿಷದಲ್ಲಿ ದಾಖಲಿಸಿದ ಗೋಲ್ನ ಸಹಾಯದಿಂದಾಗಿ, ಭಾರತ 4-0ರ ಮುನ್ನಡೆ ಪಡೆಯಿತು.
ಹೀಗೆ, ಪ್ರತಿ ಹಂತದಲ್ಲೂ ಎದುರಾಳಿಗಳ ಮೇಲೆ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಭಾರತ ತಂಡ, ಅಂತಿಮವಾಗಿ 4-0 ಗೋಲುಗಳ ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿತು.
ಚೀನಾ ವಿರುದ್ಧ ಜಯ ಸಾಧಿಸಿರುವ ಭಾರತ ತಂಡ, ತನ್ನ ಮುಂದಿನ ಹಾಗೂ ರೌಂಡ್-ರಾಬಿನ್ ಸುತ್ತಿನ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ.