ಸಂತೋಷ್ ಟ್ರೋಫಿ: ರಾಜ್ಯಕ್ಕೆ ಸೋಲು
ಕೊಲ್ಲಂ: ಕೇರಳದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಫುಟ್ಬಾಲ್ ಸಂತೋಷ್ ಟ್ರೋಫಿಯ ಮೊದಲ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಶನಿವಾರ ಸೋಲನುಭವಿಸಿದೆ.
ಪಶ್ಚಿಮ ಬಂಗಾಳದ ವಿರುದ್ಧ ನಡೆದ ಪಂದ್ಯದಲ್ಲಿ ರಾಜ್ಯ ತಂಡ 1-0 ಅಂತರದಿಂದ ಪರಾಭವ ಹೊಂದಿತು. ಪಂದ್ಯದ 30ನೇ ನಿಮಿಷದಲ್ಲಿ ಕೋಲ್ಕತಾ ಪರ ಗೋಲು ದಾಖಲಿಸಿದ ರಾಬಿನ್ ಹೆಲಾಲ್ ಅವರು ಜಯ ರೂವಾರಿ ಎನಿಸಿದರು. ಸೋಮವಾರ ಮಣಿಪುರ ಮತ್ತು ಗುರುವಾರ ಪಂಜಾಬ್ ವಿರುದ್ಧ ಇನ್ನೆರಡು ಕ್ವಾರ್ಟರ್ಫೈನಲ್ ಪಂದ್ಯಗಳಲ್ಲಿ ಕರ್ನಾಟಕ ಸೆಣಸಲಿದೆ.