ಅಶ್ವಿನ್ಗೆ ದಂಡ
ಚೆನ್ನೈ: ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಬೌಲಿಂಗ್ ಪ್ರದರ್ಶಿಸುತ್ತಿರುವ ಭಾರತದ ಸ್ಪಿನ್ ಬೌಲರ್ ಆರ್. ಅಶ್ವಿನ್ ಅವರಿಗೆ, ಐಸಿಸಿ ನೀತಿ ಸಿಂಹಿತೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ನ ಮೂರನೇ ದಿನ ಬ್ಯಾಟಿಂಗ್ ಮಾಡಿದ ಅಶ್ವಿನ್ ಅವರು, ಬ್ಯಾಟ್ ಮೇಲೆ ಐಸಿಸಿ ನಿಯಮ ಮೀರಿ ಲೊಗೋಗಳನ್ನು ಬಳಸಿದ ಹಿನ್ನೆಲೆಯಲ್ಲಿ ಪಂದ್ಯದ ಶೇ. 10ರಷ್ಟು ದಂಡ ವಿಧಿಸಲಾಗಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಬಟ್ಟೆ ಮತ್ತು ಸಾಧನಗಳಿಗೆ ಸಂಬಂಧಿಸಿದ ಐಸಿಸಿ ನಿಯಮ ಕಲಂ 2.1.1 ಪ್ರಕಾರ ನೀತಿ ಸಂಹಿತೆ ಉಲ್ಲಂಘಿಸಿದ ಅಶ್ವಿನ್ ಈಗ ದಂಡ ತೆರಬೇಕಾಗಿದೆ.
'ಆಟಗಾರನೊಬ್ಬ ಮೈದಾನದಲ್ಲಿ ಬ್ಯಾಟಿಂಗ್ಗೆ ಇಳಿದಾಗ ತನ್ನ ಬ್ಯಾಟಿಂಗ್ ಪ್ಯಾಡ್ ಮೇಲೆ ಗರಿಷ್ಟ ನಾಲ್ಕು ಲೊಗೋಗಳನ್ನು ಬಳಸಲು ಅನುಮತಿ ನೀಡಲಾಗಿದೆ' ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.