ಈ ಶತಕ ಕಠಿಣ ಪರಿಶ್ರಮದ ಫಲ: ಶರ್ಮಾ
ನವದಹೆಲಿ: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ವೇಗಿಗಳನ್ನು ಎದುರಿಸಲು ವಿರಾಟ್ ಕೊಹ್ಲಿ ಕಠಿಣ ತಯಾರಿ ನಡೆಸಿದ ಬಗ್ಗೆ, ಅವರಿಗೆ ಕ್ರಿಕೆಟ್ ಕಲಿಸಿದ ಗುರು ರಾಜ್‌ಕುಮಾರ್ ಶರ್ಮಾ ಸಂತಸ ವ್ಯಕ್ತಪಡಿಸಿದ್ದಾರೆ. ಸರಣಿಗೂ ಮುನ್ನ ಕೊಹ್ಲಿ ಅದ್ಭುತ ತಯಾರಿ ನಡೆಸಿದ್ದಾರೆ ಎಂದು ತಮ್ಮ ನೆಚ್ಚಿನ ಶಿಷ್ಯನನ್ನು ಶರ್ಮಾ ಕೊಂಡಿದ್ದಾರೆ.
'ಸರಣಿಯಲ್ಲಿ ಆಸ್ಟ್ರೇಲಿಯಾ ಬೌಲರ್‌ಗಳನ್ನು ಎದುರಿಸಲು ವಿರಾಟ್ ಕೊಹ್ಲಿ ಹೇಗೆ ತಯಾರಿ ನಡೆಸಬೇಕು ಎಂಬ ಬಗ್ಗೆ ನಾನು ನಿರ್ದಿಷ್ಟವಾದ ಕಾರ್ಯತಂತ್ರ ರೂಪಿಸಿದ್ದೆ. ಆಸ್ಟ್ರೇಲಿಯಾ ವೇಗದ ಬೌಲರ್‌ಗಳು ಸ್ಥಿರವಾಗಿ 140 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ. ಇದನ್ನು ಎದುರಿಸುವುದು ಸುಲಭದ ಮಾತಲ್ಲ. ಹೀಗಾಗಿ ಅಭ್ಯಾಸ ಮಾಡುವಾಗ ಪಿಚ್‌ನ ದೂರವನ್ನು 22 ಯಾರ್ಡ್‌ನಿಂದ 20 ಯಾರ್ಡ್‌ಗೆ ಕಡಿಮೆಗೊಳಿಸಲು ನಾನು ತೀರ್ಮಾನಿಸಿದೆ' ಎಂದು ಶರ್ಮಾ ಹೇಳಿಕೊಂಡಿದ್ದಾರೆ. ವಿಶೇಷ ಕಾರ್ಯತಂತ್ರದ ಮೂಲಕ ಮೊದಲೇ ಅಭ್ಯಾಸ ಮಾಡಿಕೊಂಡಿದ್ದ ಕೊಹ್ಲಿ, ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ತಮ್ಮ 4ನೇ ಶತಕ ದಾಖಲಿಸಿದ್ದಾರೆ. ಹೀಗಾಗಿ ಶರ್ಮಾ ಅವರಿಗೆ ತೃಪ್ತಿಯಾಗಿದೆ.
'ಸರಣಿಯ ಹಿನ್ನೆಲೆಯಲ್ಲಿ ಒಂದು ವಾರದಿಂದ ಅವಿರತವಾಗಿ ಅಭ್ಯಾಸ ಮಾಡಿದ್ದಾರೆ. ಒಂದು ದಿನ ಸಹ ವಿಶ್ರಾಂತಿ ಪಡೆದಿಲ್ಲ. ಪ್ರತಿ ದಿನ 2 ಗಂಟೆಯಿಂದ ಎರಡೂವರೆ ಗಂಟೆವರೆಗೆ ವಿರಾಟ್ ನೆಟ್‌ನಲ್ಲಿ ಅಭ್ಯಾಸ ಮಾಡುತ್ತಿದ್ದರು' ಎಂದು ಶರ್ಮಾ ತಿಳಿಸಿದರು.