ಎಎಫ್ಸಿ ಚಾಲೆಂಜ್ ಕಪ್ಗೆ ಜೆಜೆ
ನವದೆಹಲಿ: ಎಎಫ್ಸಿ ಚಾಲೆಂಜ್ ಕಪ್ಗೆ ಪ್ರಕಟಿಸಲಾಗಿರುವ 23 ಸದಸ್ಯರ ಭಾರತ ಫುಟ್ಬಾಲ್ ತಂಡದಲ್ಲಿ ಸ್ಟ್ರೈಕರ್ ಜೆಜೆ ಲಾಲ್ಪೆಖಲಾ ಅವರು ಆಯ್ಕೆಯಾಗಿದ್ದಾರೆ. ಪಂದ್ಯಾವಳಿ ಮಾರ್ಚ್ 2ರಿಂದ ಮ್ಯಾನ್ಮಾರ್ನ ಯಾಗೋನ್ನಲ್ಲಿ ನಡೆಯಲಿದೆ. ತಂಡದ ಮುಖ್ಯ ಕೋಚ್ ವಿಮ್ ಕೋವರ್ಮೆನ್ಸ್ ಅವರು ಆಯ್ಕೆ ಮಾಡಿದ ತಂಡದಲ್ಲಿ ಜೆಜೆ ಆಯ್ಕೆಯಾಗುವ ನಿರೀಕ್ಷೆಗಳಿದ್ದವು.
ತಂಡ: ಗೋಲ್ಕೀಪರ್ಗಳು: ಸುಬ್ರತಾ ಪಾಲ್, ಸಂದೀಪ್ ನಂದಿ, ಕರಣ್ಜೀತ್ ಸಿಂಗ್. ರಕ್ಷಣಾ ವಿಭಾಗ: ನಿರ್ಮಲ್ ಚೆಟ್ರಿ, ಸೈಯಿದ್ ರಹೀಮ್ ನಬಿ, ಜೆಂಜಿಲ್ ಫ್ರಾನ್ಸೋ, ಗೌರಿಮಾಂಗಿ ಸಿಂಗ್, ರೋವಿಲ್ಸನ್ ರೋಡ್ರಿಗಸ್, ಶೌವಿಕ್ ಘೋಷ್, ರಾಜು ಗಾಯಕ್ವಾಡ್, ಗುರ್ಜಿಂದರ್ ಸಿಂಗ್. ಮಿಡ್ಫಿಲ್ಡರ್ಗಳು: ಲೆನ್ನಿ ರೋಡ್ರಿಗಸ್, ಲಾಲ್ಕಮಲ್ ಭೋವ್ಮಿಕ್, ಸಿ.ಕೆ. ವಿನೀತಾ, ಅರಾತಿ ಇಜುಮಿ, ಮೆಹ್ತಾಬ್ ಹೂಸೇನ್, ಫ್ರಾನ್ಸಿಸ್ಕೋ ಫರ್ನಾಂಡೀಸ್, ಅಲ್ವೇನ್ ಜಾರ್ಜ್, ಜಿವೆಲ್ ರಾಜಾ ಶಿಖ್, ಕ್ಲಫರ್ಡ್ ಮಿರಾಂಡಾ. ಪಾರವರ್ಡ್ಗಳು: ಸುನಿಲ್ ಚೆಟ್ರಿ, ರಾಬಿನ್ ಸಿಂಗ್, ಜೆಜೆ ಲಾಲ್ಪೆಖಲಾ.
ರಷ್ಯಾ ಮಣಿಸಿದ ವನಿತೆಯರು
ನವದೆಹಲಿ: ಭಾರತ ವನಿತೆಯರ ಹಾಕಿ ತಂಡ ವಿಶ್ವ ಹಾಕಿ ಲೀಗ್ನ ದ್ವಿತೀಯ ಸುತ್ತಿನ ಅಂತಿಮ ಲೀಗ್ ಪಂದ್ಯದಲ್ಲಿ ರಷ್ಯಾ ವಿರುದ್ಧ 1-0 ಅಂತರದಿಂದ ಜಯ ಸಾಧಿಸಿತು. ಇದರೊಂದಿಗೆ ಅಗ್ರ ಸ್ಥಾನ ಪಡೆದ ಭಾರತ ವಿಶ್ವ ಹಾಕಿ ಲೀಗ್ನ 3ನೇ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ.ಭಾರತದೊಂದಿಗೆ ಜಪಾನ್ ಸಹ ಮೂರನೇ ಸುತ್ತಿಗೆ ಅರ್ಹತೆ ಪೆಡುದುಕೊಂಡಿದೆ. ಪಂದ್ಯಾವಳಿಯಲ್ಲಿ ಭಾರತ ಮತ್ತು ಜಪಾನ್ ತಲಾ 9 ಪಾಯಿಂಟ್ ಗಳಿಸಿದವು. ಆದರೆ, ಉತ್ತಮ ಸಾಧನೆ ಮಾಡಿದ ಭಾರತ ಅಗ್ರ ಸ್ಥಾನ ಪಡೆಯಿತು. 3ನೇ ಸುತ್ತಿನ ವಿಶ್ವ ಹಾಕಿ ಲೀಗ್ ಪಂದ್ಯಾವಳಿ ಹಾಲೆಂಡ್ನಲ್ಲಿ ನಡೆಯಲಿರುವ ವಿಶ್ವಕಪ್ ಹಾಕಿ ಪಂದ್ಯಾವಳಿಯ ಅರ್ಹತಾ ಪಂದ್ಯಾವಳಿಯಾಗಿದೆ.
ಪಂದ್ಯದ 51ನೇ ನಿಮಿಷದಲ್ಲಿ ಗೋಲು ಮಹತ್ವದ ಗೋಲು ದಾಖಲಿಸಿದ ರಾಣಿ ರಾಂಪಾಲ್ ಜಯದ ರೂವಾರಿ ಎನಿಸಿದರು.