ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಏಕದಿನದಲ್ಲಿ ಭಾರತದ ಪ್ರಭುತ್ವ

Srinivasa Murthy VN
Updated On : 25 Feb 2013, 11:36 am

ದುಬೈ: ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ಭಾರತ ತನ್ನ ಪ್ರಭುತ್ವ ಸಾಧಿಸಿದೆ. ಅಗ್ರಸ್ಥಾನದ ಪೈಪೋಟಿಯಲ್ಲಿದ್ದ ಇಂಗ್ಲೆಂಡ್ ತಂಡ 2 ರೇಟಿಂಗ್ ಪಾಯಿಂಟ್ ಕಳೆದುಕೊಂಡ ಹಿನ್ನೆಲೆಯಲ್ಲಿ, ಭಾರತ ಅಗ್ರ ಸ್ಥಾನದಲ್ಲಿ ವಿಜೃಂಭಿಸಿದೆ. ನ್ಯೂಜಿಲೆಂಡ್ ವಿರುದ್ಧ ನಡೆದ ಸರಣಿಯಲ್ಲಿ ಇಂಗ್ಲೆಂಡ್ 2-1 ಅಂತರದಿಂದ ಜಯ ಸಾಧಿಸಿದ್ದೇ ಅದು 2 ರೇಟಿಂಗ್ ಪಾಯಿಂಟ್ ಕಳೆದುಕೊಳ್ಳಲು ಕಾರಣವಾಗಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ನಡೆಯಲು ಸರಿಯಾಗಿ 100 ದಿನ ಬಾಕಿ ಉಳಿದಿದ್ದು, ಇಂಗ್ಲೆಂಡ್ 117 ರೇಟಿಂಗ್ ಪಾಯಿಂಟ್ ಹೊಂದುವ ಮೂಲಕ ಎರಡನೇ ಸ್ಥಾನದಲ್ಲಿದ್ದರೂ, ಅದಕ್ಕಿಂತ ಕೇವಲ 1 ರೇಟಿಂಗ್ ಪಾಯಿಂಟ್ ಕಡಿಮೆ ಹೊಂದಿರುವ ಆಸ್ಟ್ರೇಲಿಯಾ (116) ಮೂರನೇ ಸ್ಥಾನದಲ್ಲಿದೆ. ಇದು ಇಂಗ್ಲೆಂಡ್‌ಗೆ ಆತಂಕವನ್ನುಂಟು ಮಾಡಿದೆ. ಇನ್ನು 112 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿರುವ ದಕ್ಷಿಣ ಆಫ್ರಿಕಾ ನಾಲ್ಕನೇ ಸ್ಥಾನದಲ್ಲಿದೆ.
ವೇಳಾಪಟ್ಟಿಯ ಪ್ರಕಾರ ಭಾರತ ಮತ್ತು ಇಂಗ್ಲೆಂಡ್ ಏಪ್ರಿಲ್‌ಗೂ ಮುನ್ನ ಯಾವುದೇ ಏಕದಿನ ಪಂದ್ಯಗಳನ್ನು ಆಡುವುದಿಲ್ಲ. ಆದರೆ, ನಾಲ್ಕನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಮಾತ್ರ ಮಾರ್ಚ್ 10ರಿಂದ ಪಾಕಿಸ್ತಾನದ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗವಹಿಸಲಿದೆ. ಹೀಗಾಗಿ ಅದು ರ್ಯಾಂಕಿಂಗ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್‌ಗೆ ಅಡ್ಡಿಯಾಗಬಹುದು.
ಪಾಕಿಸ್ತಾನದ ವಿರುದ್ಧದ ಸರಣಿಯಲ್ಲಿ ದಕ್ಷಿಣ ಆಫ್ರಿಕಾ 4-1 ಅಂತರದಿಂದ ಜಯ ಸಾಧಿಸಿದರೆ 117 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಇಂಗ್ಲೆಂಡ್‌ನೊಂದಿಗೆ ಜಂಟಿ 2ನೇ ಸ್ಥಾನ ಪಡೆಯಲಿದೆ. ಒಂದು ವೇಳೆ ದಕ್ಷಿಣ ಆಫ್ರಿಕಾ ತಂಡ ಪಾಕ್ ವಿರುದ್ಧ ಕ್ಲೀನ್ ಸ್ವೀಪ್ ಮಾಡಿದ 3 ಸ್ಥಾನ ಮೇಲಿರುವ ಮೂಲಕ ಅಗ್ರಸ್ಥಾನಕ್ಕೇರಲಿದೆ. ಅಲ್ಲದೆ ಅದು ಐಸಿಸಿಯಿಂದ ಅಂದಾಜು ರು. 95 ಲಕ್ಷ ಬಹುಮಾನ ಮತ್ತು ಏಕದಿನ ಶೀಲ್ಡ್ ಪಡೆಯಲಿದೆ. ಪ್ರಶಸ್ತಿ ಪಡೆಯಲು ಏಪ್ರಿಲ್ 1 ಅಂತಿಮ ದಿನಾಂಕವಾಗಿದೆ.
ಬ್ಯಾಟಿಂಗ್‌ನಲ್ಲಿ ದಕ್ಷಿಣ ಆಫ್ರಿಕಾದ ಹಶೀಂ ಆಮ್ಲಾ ಅವರು ಅಗ್ರ ಸ್ಥಾನದಲ್ಲಿ ಮುಂದುವರಿದ್ದಾರೆ. ಎಬಿ ಡಿವಿಲಿಯರ್ಸ್ 2ನೇ ಸ್ಥಾನದಲ್ಲಿದ್ದಾರೆ. ಇನ್ನು ಭಾರತದ ವಿರಾಟ್ ಕೊಹ್ಲಿ ಮತ್ತು ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಕ್ರಮವಾಗಿ 3ನೇ ಮತ್ತು ನಾಲ್ಕನೇ ಸ್ಥಾನ ಹೊಂದಿದ್ದಾರೆ.
ಸುರೇಶ್ ರೈನಾ ಒಂದು ಸ್ಥಾನ ಹಿಂಬಡ್ತಿ ಪಡೆದಿದ್ದು 12ನೇ ಸ್ಥಾನದಲ್ಲಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಭಾರತದ ಸ್ಪಿನ್ ಬೌಲರ್ ಆರ್. ಅಶ್ವಿನ್ ಅವರು ಒಂದು ಸ್ಥಾನ ಬಡ್ತಿ ಪಡೆದಿದ್ದು, ಇತರ ಇಬ್ಬರೊಂದಿಗೆ 13ನೇ ಸ್ಥಾನ ಹಂಚಿಕೊಂಡಿದ್ದಾರೆ. ರವೀಂದ್ರ ಜಡೇಜಾ 9ನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನದ ಸೈಯೀದ್ ಅಜ್ಮಲ್ ಅಗ್ರಸ್ಥಾನದಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement