ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕೆಕೆಆರ್‌ನಿಂದ ಅಕ್ರಮ್ ದೂರ

Srinivasa Murthy VN
Updated On : 25 Feb 2013, 11:38 am

ನವದೆಹಲಿ: ಪಾಕಿಸ್ತಾನದ ಖ್ಯಾತ ಮಾಜಿ ವೇಗದ ಬೌಲರ್ ವಾಸೀಂ ಅಕ್ರಮ್ ಅವರು ಐಪಿಎಲ್‌ನ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಬೌಲಿಂಗ್ ತರಬೇತುದಾರ ಹುದ್ದೆಯಿಂದ ಹಿಂದೆ ಸರಿದಿದ್ದಾರೆ. ವೈಯಕ್ತಿಕ ಕಾರಣಗಳೇ ಹುದ್ದೆಯಿಂದ ಹಿಂದೆ ಸರಿಯಲು ಕಾರಣ ಎಂದು ಅಕ್ರಮ್ ಹೇಳಿಕೊಂಡಿದ್ದಾರೆ. ಕಳೆದ ಮೂರು ಆವೃತ್ತಿಗಳಿಂದ ಅಕ್ರಮ್ ಐಪಿಎಲ್‌ನಲ್ಲಿ ಕೆಕೆಆರ್ ತಂಡದ ಅವಿಭಾಜ್ಯ ಅಂಗವಾಗಿದ್ದರು. ಅಕ್ರಮ್ ತಮ್ಮ ಕುಟುಂಬದೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ತೀರ್ಮಾನಿಸಿದ್ದಾರಂತೆ. ಹಾಗಾಗಿ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ ಎಂದು ಕೆಕೆಆರ್ ತಂಡದ ಆಡಳಿತ ಮಂಡಳಿ ತಿಳಿಸಿದೆ. ಅಕ್ರಮ್ ಅವರು ತೈಮೂರ್ ಮತ್ತು ಅಕ್ಬರ್ ಎಂಬ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಅಕ್ರಮ್ ತಂಡದ ಮುಖ್ಯ ತರಬೇತುದಾರ ಮತ್ತು ನಾಯಕರೊಂದಿಗೆ ಕಳೆದ ಬಾರಿಯ ಆವೃತ್ತಿಯಲ್ಲಿ ಕೆಕೆಆರ್ ತಂಡ ಚಾಂಪಿಯನ್ ಪಟ್ಟ ಗಿಟ್ಟಿಸಲು ಪ್ರಮುಖ ಪಾತ್ರ ನಿರ್ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement