ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಧ್ಯಾನ್‌ಚಂದ್ ಮೈದಾನಕ್ಕೆ ಕುಡುಕರ ಕಾವಲು!

Srinivasa Murthy VN
Updated On : 25 Feb 2013, 11:38 am

ನವದೆಹಲಿ: ವಿಶ್ವ ಹಾಕಿ ಲೀಗ್ ಪಂದ್ಯಾವಳಿಯ ದ್ವಿತೀಯ ಸುತ್ತಿನ ಪಂದ್ಯಗಳು ನಡೆದ ರಾಜಧಾನಿಯಲ್ಲಿನ ಮೇಜರ್ ಧ್ಯಾನ್‌ಚಂದ್ ಸ್ಟೇಡಿಯಂಗೆ ಕುಡಕರೇ ಕಾವಲುಗಾರರಂತೆ. ಭಾನುವಾರ ಪಂದ್ಯಾವಳಿ ಅಂತ್ಯಗೊಂಡ ನಂತರ ಹಾಕಿ ಇಂಡಿಯಾ ಅಧಿಕಾರಿಗಳು ದೂರು ದಾಖಲಿಸಿದ ನಂತರವೇ ಈ ಸಂಗತಿ ಬಹಿರಂಗವಾಗಿದೆ.
ಹಾಕಿ ಇಂಡಿಯಾ ಅಧಿಕಾರಿಗಳು ನೀಡಿದ ದೂರಿನ ಹಿನ್ನೆಲೆಯಲ್ಲಿ ಕಾವಲುಗಾರರ ಮೇಲ್ವಿಚಾರಕನನ್ನೇ ಪೊಲೀಸರು ಬಂಧಿಸಿದ್ದಾರೆ. ಆದರೆ, ನಂತರ ಆತ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾನೆ.
ಮೇಜರ್ ಧ್ಯಾನ್‌ಚಂದ್ ಸ್ಟೇಡಿಯಂನ್ನು ರಾಷ್ಟ್ರೀಯ ಮೈದಾನ ಎಂದು ಸಹ ಕರೆಯಲಾಗುತ್ತದೆ. ಸ್ಟೇಡಿಯಂಗೆ ಹಾಕಲಾಗಿರುವ ಖಾಸಗಿ ಭದ್ರತಾ ಸಂಸ್ಥೆಯ ಕಾವಲುಗಾರರ ಮಲ್ವಿಚಾರಕ ಸನ್ಹಸಾರ್ ಪವಾರ್ ಅವರನ್ನು ಕಳೆದ ರಾತ್ರಿ ದೆಹಲಿಯ ಟಿಳಕ ಮಾರ್ಗ್ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದರು.
'ಪವಾರ್ ಹಲವಾರು ತಪ್ಪುಗಳನ್ನು ಮಾಡಿದ್ದಾನೆ. ಕರ್ತವ್ಯದಲ್ಲಿದ್ದಾಗಲೇ ಸದಾ ಮದ್ಯಪಾನ ಮಾಡುತ್ತಾನೆ. ಹಾಕಿ ಇಂಡಿಯಾ ಲೀಗ್‌ನ ಕೊನೆಯ ದಿನ ಪಂದ್ಯಾವಳಿಗೆ ಹಲವಾರು ಸಾಧನಗಳನ್ನು ಹೊತ್ತು ಬಂದಿದ್ದ ವಾಹನವನ್ನು ಒಳಗೆ ಬಿಡಲು ಒಪ್ಪದ ಪವಾರ್, ಹಣ ಅಥವಾ ಮದ್ಯವನ್ನು ನೀಡಿದರೆ ಮಾತ್ರ ವಾಹನಕ್ಕೆ ಅನುಮತಿ ನೀಡುತ್ತೇನೆ ಎಂದು ಒತ್ತಾಯಿಸಿದ. ಅಲ್ಲದೆ ಹಲವಾರು ಉನ್ನತ ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ' ಎಂದು ಹಾಕಿ ಇಂಡಿಯಾ ಮೂಲಗಳು ಹೇಳಿವೆ.
ಐತಿಹಾಸಿಕ ಸ್ಥಳವಾದ ಧ್ಯಾನ್‌ಚಂದ್ ಸ್ಟೇಡಿಯಂಗೆ ಇಂತಹ ಕಾವಲುಗಾರರನ್ನು ನೇಮಿಸಿದರೆ, ಇತರ ಸ್ಟೇಡಿಯಂಗಳ ಪಾಡೇನು?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement