ಸಂತೋಷ್ ಟ್ರೋಫಿ: ರಾಜ್ಯಕ್ಕೆ ಜಯ
ಕೊಲ್ಲಂ: ಆಕರ್ಷಕ ಪ್ರದರ್ಶನ ನೀಡಿದ ಕರ್ನಾಟಕ ಆಟಗಾರರು ಇಲ್ಲಿ ನಡೆಯುತ್ತಿರುವ ಸಂತೋಷ್ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್ ಪಂದ್ಯಾವಳಿಯ 2ನೇ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮಣಿಪುರದ ವಿರುದ್ಧ 3-1 ಗೋಲುಗಳ ಅಂತರದಿಂದ ಜಯ ಸಾಧಿಸಿದರು. ಸ್ಟೀಫನ್ ಪಂದ್ಯದ 3ನೇ ನಿಮಿಷದಲ್ಲಿ ಮತ್ತು ರಾಜೇಶ್ ಪಂದ್ಯದ 10ನೇ ನಿಮಿಷದಲ್ಲಿ ಗೋಲು ದಾಖಲಿಸುವ ಮೂಲಕ, ಕರ್ನಾಟಕ ತಂಡ ಪಂದ್ಯದ ಮೊದಲಾರ್ಧಲ್ಲಿ 2-0 ಅಂತರದಿಂದ ಮುನ್ನಡೆ ಕಂಡುಕೊಂಡಿತ್ತು.
ದ್ವಿತೀಯಾರ್ಧ ಪಂದ್ಯದ 83ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಕರ್ನಾಟಕದ ಆ್ಯಮೋಸ್ ಟಿ ತಂಡದ ಜಯದ ಅಂತರವನ್ನು ಹೆಚ್ಚಿಸಿದರು. ಮಣಿಪುರ ತಂಡದ ಪರ ನಾಯಕ ಮಿಯಾನೋ ಅವರು ಮಾತ್ರ ಪಂದ್ಯದ 63ನೇ ನಿಮಿಷದಲ್ಲಿ ಏಕೈಕ ಗೋಲು ದಾಖಲಿಸಿದರು.