ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸಚಿನ್ ತೆಂಡೂಲ್ಕರ್ ದಾಖಲೆ ಅಳಿಸಿದ ಧೋನಿ

ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡದ ನಾಯಕನಾಗಿ ಅತಿ ಹೆಚ್ಚು ರನ್ ಗಳಿಸುವ ಮೂಲಕ ಮಹೇಂದ್ರ ಸಿಂಗ್ ಧೋನಿ ಹೊಸ ದಾಖಲೆ ನಿರ್ಮಿಸಿದರು.

Srinivasa Murthy VN
Updated On : 25 Feb 2013, 11:35 am

ಚೆನ್ನೈ: ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡದ ನಾಯಕನಾಗಿ ಅತಿ ಹೆಚ್ಚು ರನ್ ಗಳಿಸುವ ಮೂಲಕ ಮಹೇಂದ್ರ ಸಿಂಗ್ ಧೋನಿ ಹೊಸ ದಾಖಲೆ ನಿರ್ಮಿಸಿದರು. ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ 224 ರನ್ ಗಳಿಸುವ ಮೂಲಕ ಧೋನಿ ಈ ಹೊಸ ದಾಖಲೆ ಬರೆದರು.
ಭಾನುವಾರವೇ ದ್ವಿಶತಕ ಪೂರೈಸಿದ್ದ ಧೋನಿ ಅವರು, ಸೋಮವಾರ ಸಚಿನ್ ತೆಂಡೂಲ್ಕರ್ ಭಾರತ ತಂಡದ ನಾಯಕನಾಗಿ ನ್ಯೂಜಿಲೆಂಡ್ ವಿರುದ್ಧ 1999ರಲ್ಲಿ ಅಹ್ಮದಾಬಾದ್‌ನಲ್ಲಿ ಗಳಿಸಿದ್ದ 217 ರನ್‌ಗಳ ಮೊತ್ತ ದಾಟಿದರು. 144ನೇ ಓವರ್‌ನಲ್ಲಿ ನಥಾನ್ ಲಯಾನ್ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಧೋನಿ 217 ರನ್ ಗಳಿಸಿದರು. ನಂತರ ಒಂದು ರನ್ ಮಾಡುವ ಮೂಲಕ ದಾಖಲೆ ಮುರಿದರು. ಆದರೆ, ವಿಶ್ವದಲ್ಲಿ ತಂಡವೊಂದರ ನಾಯಕನಾಗಿ ಆ್ಯಂಡಿ ಫ್ಲ್ಲವರ್ ಗಳಿಸಿದ ಮೊತ್ತವನ್ನು ಅಳಿಸಿ ಹಾಕಲು ಧೋನಿಗೆ ಇನ್ನೂ 8 ರನ್ ಕಡಿಮೆಯಾಯಿತು.

ಹೆಚ್ಚು ಮೊತ್ತ ಗಳಿಸಿದ ಭಾರತದ ನಾಯಕರು
224 ಮಹೇಂದ್ರ ಸಿಂಗ್ ಧೋನಿ ಆಸ್ಟ್ರೇಲಿಯಾ ವಿರುದ್ಧ (ಚೆನ್ನೈ)
217 ಸಚಿನ್ ತೆಂಡೂಲ್ಕರ್ ನ್ಯೂಜಿಲೆಂಡ್ ವಿರುದ್ಧ (ಅಹ್ಮದಾಬಾದ್)
205 ಸುನಿಲ್ ಗವಾಸ್ಕರ್ ವೆಸ್ಟ್ ಇಂಡೀಸ್ ವಿರುದ್ಧ (ಮುಂಬೈ)
203 ಮನ್ಸೂಲರ್ ಅಲಿ ಖಾನ್ ಪಟೌಡಿ ಇಂಗ್ಲೆಂಡ್ ವಿರುದ್ಧ (ದೆಹಲಿ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement