ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಟೆಸ್ಟ್ ಜಯ: ಗಂಗೂಲಿ ಸಾಧನೆ ಸರಿಗಟ್ಟಿದ ಮಹೇಂದ್ರ ಸಿಂಗ್ ಧೋನಿ

ಆಸೀಸ್ ವಿರುದ್ಧ ಟೆಸ್ಟ್‌ನಲ್ಲಿ ಭಾರತ ತಂಡವನ್ನು ಜಯದ ಗುರಿಯತ್ತ ಬೆನ್ನಟ್ಟಿದ ಧೋನಿ

Srinivasa Murthy VN
Updated On : 27 Feb 2013, 11:49 am

ನವದೆಹಲಿ: ಆಸೀಸ್ ವಿರುದ್ಧ ಚೆನ್ನೈ ಟೆಸ್ಟ್‌ನಲ್ಲಿ ಭಾರತ ತಂಡವನ್ನು ಜಯದ ಗುರಿಯತ್ತ ಯಶಸ್ವಿಯಾಗಿ ಬೆನ್ನಟ್ಟಿದ ಧೋನಿ, ನಾಯಕತ್ವದ ವಿಷಯದಲ್ಲಿ ಗಂಗೂಲಿ ಅವರ ಸಾಧನೆಯನ್ನು ಸರಿಗಟ್ಟಿದ್ದಾರೆ.
ಗಂಗೂಲಿ ನಾಯಕತ್ವ ವಹಿಸಿದ್ದ 44 ಪಂದ್ಯಗಳಲ್ಲಿ ಭಾರತ 21 ಪಂದ್ಯಗಳಲ್ಲಿ ಗೆದ್ದಿದೆ. ಇದೀಗ, ಧೋನಿ ನಾಯಕತ್ವದಲ್ಲಿ ಭಾರತ ಒಟ್ಟು 44 ಪಂದ್ಯಗಳನ್ನಾಡಿದ್ದು, ಅವುಗಳಲ್ಲಿ 21ರಲ್ಲಿ ಜಯಗಳಿಸಿದೆ. ಇವರಿಬ್ಬರ ನಂತರದ ಸ್ಥಾನದಲ್ಲಿ ಅಜರುದ್ದೀನ್, ಗವಾಸ್ಕರ್ ಇದ್ದಾರೆ.
ಅಲ್ಲದೇ, ಟೆಸ್ಟ್ ತಂಡದ ನಾಯಕನಾಗಿ ಧೋನಿ ಅವರ ಬ್ಯಾಟಿಂಗ್ ಸರಾಸರಿ 44.75ರಷ್ಟಿದ್ದು, ಅವರು ಸಚಿನ್ (51.35), ಸುನಿಲ್ ಗವಾಸ್ಕರ್ (50.72) ನಂತರದ ಸ್ಥಾನದಲ್ಲಿದ್ದಾರೆ.
ಇನ್ನು, ವಿದೇಶದಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದ ಯಶಸ್ಸು ಗಂಗೂಲಿ ನಾಯಕತ್ವಕ್ಕೇ ಸಲ್ಲುತ್ತದೆ. 28 ಪಂದ್ಯಗಳಲ್ಲಿ 11ರಲ್ಲಿ ಭಾರತ ಜಯ ಗಳಿಸಿದೆ. ಅವರ ನಂತರದ ಸ್ಥಾನದಲ್ಲಿ ಧೋನಿ, ದ್ರಾವಿಡ್ (ತಲಾ 5 ಜಯ) ಇದ್ದಾರೆ. ಗಂಗೂಲಿ ಅವರು ವಿದೇಶದಲ್ಲಿ ಗೆದ್ದ 11 ಟೆಸ್ಟ್‌ಗಳಲ್ಲಿ ಆರು ಬಾಂಗ್ಲಾದೇಶ ಹಾಗೂ ಜಿಂಬಾವ್ವೆ ವಿರುದ್ಧ ಎಂಬುದು ಗಮನಾರ್ಹ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement