175 ರನ್ ಗಿಂತ ಜಯ ಮುಖ್ಯವಾಗಿತ್ತು: ಸಚಿನ್
ಆಸ್ಟ್ರೇಲಿಯಾ ವಿರುದ್ಧ ಗಳಿಸಿದ್ದ 175 ರನ್ ನನ್ನ...
ನವದೆಹಲಿ: ಭಾರತದ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ತಮ್ಮ ವೃತ್ತಿ ಜೀವನದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪ್ರದರ್ಶನವನ್ನು ಮೆಲುಕು ಹಾಕಿದ್ದಾರೆ. 2009ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಗಳಿಸಿದ್ದ 175 ರನ್ ನನ್ನ ಶ್ರೇಷ್ಠ ಇನಿಂಗ್ಸ್ಗಳಲ್ಲಿ ಒಂದಾಗಿದೆ.
ಆದರೆ, ಆ ಪಂದ್ಯದಲ್ಲಿ ನಾನು ಅಷ್ಟು ರನ್ ಗಳಿಸುವುದಕ್ಕಿಂತ, ಭಾರತ ತಂಡ ಗೆಲ್ಲುವುದು ನನಗೆ ಮುಖ್ಯವಾಗಿತ್ತು ಎಂದು ಸಚಿನ್ ತೆಂಡೂಲ್ಕರ್ ಅವರು ಹೇಳಿಕೊಂಡಿದ್ದಾರೆ. ಏಳು ಏಕದಿನ ಪಂದ್ಯಗಳ ಸರಣಿಯ ಐದನೇ ಪಂದ್ಯದಲ್ಲಿ ಆಸೀಸ್ ನೀಡಿದ್ದ 351 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ, ಪಂದ್ಯದಲ್ಲಿ ಕೇವಲ 3 ರನ್ಗಳಿಂದ ಸೋಲನುಭವಿಸಿತ್ತು. ಈ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ನಡೆಸಿದ್ದ ಸಚಿನ್ 141 ಎಸೆತಗಳಲ್ಲಿ 175 ರನ್ ಗಳಿಸಿದ್ದರು.