ಕ್ವಾರ್ಟರ್ಗೆ ನಡಾಲ್, ಫೆರರ್
ಅಕಾಪುಲ್ಕೊ (ಮೆಕ್ಸಿಕೊ): ಸ್ಪೇನ್ನ ಟೆನಿಸ್ ಆಟಗಾರ ರಫೆಲ್ ನಡಾಲ್ ಅವರು, ಮೆಕ್ಸಿಕನ್ ಓಪನ್ ಎಟಿಪಿ ಟೆನಿಸ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಗುರುವಾರ ನಡೆದ ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು, ಅರ್ಜೆಂಟೀನಾದ ಮಾರ್ಟಿನ್ ಅಲ್ಯುಂಡ್ ಅವರನ್ನು 6-0, 6-4 ಅಂತರದಲ್ಲಿ ಸೋಲಿಸಿದರು.
ಇದೇ ಪಂದ್ಯಾವಳಿಯನ್ನು 2005ರಲ್ಲಿ ಗೆದ್ದುಕೊಂಡಿದ್ದ ನಡಾಲ್, ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವದ 77ನೇ ಶ್ರೇಯಾಂಕದ ಲಿಯಾನಾರ್ಡೊ ಮೇಯರ್ ಅವರನ್ನು ಎದುರಿಸಲಿದ್ದಾರೆ.
ಲಿಯೋನಾರ್ಡೊ ಅವರು ತಮ್ಮ ಪ್ರೀ-ಕ್ವಾರ್ಟರ್ ಫೈನಲ್ನಲ್ಲಿ ರಷ್ಯಾದ ಆ್ಯಂಡ್ರಿ ಕುಸ್ನೆತ್ಸೊವ್ ಅವರನ್ನು 6-2, 6-2 ಅಂತರದಲ್ಲಿ ಸೋಲಿಸಿ, ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಫೆರರ್ಗೆ ಗೆಲುವು: ಕಳೆದ ಮೂರು ವರ್ಷಗಳಿಂದ ಮೆಕ್ಸಿಕನ್ ಓಪನ್ ಪಂದ್ಯಾವಳಿಯನ್ನು ಸತತವಾಗಿ ಗೆದ್ದಿರುವ ಡೇವಿಡ್ ಫೆರರ್ ಅವರೂ, ಈ ಬಾರಿಯ ಪಂದ್ಯಾವಳಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಬುಧವಾರ ನಡೆದ ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು, ಇಟಲಿಯ ಪೌಲೋ ಲೋರೆಂಜಿ ಅವರನ್ನು 6-4, 7-6 (4) ಅಂತರದಲ್ಲಿ ಸೋಲಿಸಿದರು.
ಕ್ವಾರ್ಟರ್ ಫೈನಲ್ನಲ್ಲಿ ಅವರು, ಅರ್ಜೆಂಟೀನಾದ ಹೊರಾಸಿಯೊ ಜೆಬಲ್ಲೋಸ್ ಅವರನ್ನು ಎದುರಿಸಲಿದ್ದಾರೆ.