ಪ್ರಿ ಕ್ವಾರ್ಟರ್ಗೆ ಆನಂದ್ ಪವಾರ್
ನವದೆಹಲಿ: ಭಾರತದ ಬ್ಯಾಡ್ಮಿಂಟನ್ ತಾರೆ ಆನಂದ್ ಪವಾರ್ ಅವರು ಜರ್ಮನ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಿ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದಾರೆ.
ಆನಂದ್ ಅವರು 6ನೇ ಶ್ರೇಯಾಂಕ ಪಡೆದಿದ್ದ ವಿಕ್ಟರ್ ಅಕ್ಷೆಲ್ಸೆನ್ ಅವರನ್ನು 21-11, 22-20 ನೇರ ಸೆಟ್ಗಳ ಅಂತರದಿಂದ ಸೋಲಿಸುವ ಮೂಲಕ, ದೇಶದ ಇನ್ನೊಬ್ಬ ಆಟಗಾರ ಅಜಯ್ ಜಯರಾಂ ಅವರೊಂದಿಗೆ ಪ್ರಿ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದಾರೆ.
ಕೇವಲ 35 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ವಿಶ್ವದ ನಂ. 51ನೇ ಆಟಗಾರ ಆನಂದ್ ಅವರು ನಂ.22ನೇ ಆಟಗಾರನನ್ನು ಸುಲಭವಾಗಿ ಮಣಿಸಿದರು. ಮುಂಬೈ ಬ್ಯಾಡ್ಮಿಂಟನ್ ತಾರೆ ಮುಂದಿನ ಸುತ್ತಿನಲ್ಲಿ ಚೀನಾ ತೈಪೇಯ ಸುವಾನ್ ಯಿ ಸುಹ ಅವರನ್ನು ಎದುರಿಸಲಿದ್ದಾರೆ.
ಆದರೆ, ಭಾರತದ ಇನ್ನೊಬ್ಬ ಬ್ಯಾಡ್ಮಿಂಟನ್ ತಾರೆ ಅರವಿಂದ್ ಭಟ್ ಅವರು 2ನೇ ಶ್ರೇಯಾಂಕ ಪಡೆದಿದ್ದ ಬೂನ್ಸಾಕ್ ಪೊನ್ಸಾನಾ ಅವರ ವಿರುದ್ಧ 10-21, 16-21 ಸೆಟ್ಗಳ ಅಂತರದಿಂದ ಸೋಲು ಕಂಡಿದ್ದಾರೆ.