ಭೂಪತಿ- ಬೋಪಣ್ಣ ಮುಖಾಮುಖಿ
ದುಬೈ: ಭಾರತದ ಟೆನಿಸ್ ತಾರೆಗಳಾದ ಮಹೇಶ್ ಭೂಪತಿ ಮತ್ತು ರೋಹನ್ ಬೋಪಣ್ಣ ಅವರು ದುಬೈ ಟೆನಿಸ್ ಚಾಂಪಿಯನ್ಷಿಪ್ನ ಪುರುಷರ ಡಬಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದಾರೆ. ದುಬೈ ಓಪನ್ನ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ತಮ್ಮ ಜತೆಯಾಟಗಾರರೊಂದಿಗೆ ಜಯ ಸಾಧಿಸಿದ ನಂತರ ಈಗ ಸೆಮಿಫೈನಲ್ಗೆ ಲಗ್ಗೆ ಹಾಕಿದ್ದಾರೆ.
ಶ್ರೇಯಾಂಕ ರಹಿತ ಬೋಪಣ್ಣ ಮತ್ತು ರಾಜೀವ್ ರಾಮ್ ಜೋಡಿ, ಕ್ವಾರ್ಟರ್ಫೈನಲ್ನಲ್ಲಿ ರೋಮೆನಿಯಾದ ವಿಕ್ಟರ್ ಹಾನೆಸ್ಕು ಮತ್ತು ಚೆಕ್ ಗಣರಾಜ್ಯದ ಲೂಕಾಸ್ ರಾಸೋಲ್ ಜೋಡಿಯನ್ನು 4-6, 7-5, 10-4 ಸೆಟ್ಗಳ ಅಂತರದಿಂದ ಸೋಲಿಸಿತು.
ದಿನದ ಮತ್ತೊಂದು ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಭಾರತದ ಮಹೇಶ್ ಭೂಪತಿ ಮತ್ತು ಫ್ರಾನ್ಸ್ನ ಮೈಕೆಲ್ ಲಾಡ್ರಾ ಜೋಡಿ, ಪೋಲೆಂಡ್ನ ಮಾರಿಸ್ ಫಿಸ್ಟನ್ಬರ್ಗ್ ಮತ್ತು ಮಾರ್ಕಿನ್ ಮಾಟ್ಕೋವಸ್ಕಿ ಜೋಡಿಯನ್ನು 4-6, 6-4, 10-8 ಸೆಟ್ಗಳ ಅಂತರದಿಂದ ಪರಾಭವಗೊಳಿಸಿತು.