ಸಂತೋಷ್ ಟ್ರೋಫಿ: ಫೈನಲ್ಗೆ ಕೇರಳ
ಕೊಚ್ಚಿ: ಕೇರಳ ಫುಟ್ಬಾಲ್ ತಂಡ, ಹಾಲಿ ನಡೆಯುತ್ತಿರುವ 67ನೇ ಸಂತೋಷ್ ಟ್ರೋಫಿ ಪಂದ್ಯಾವಳಿಯ ಫೈನಲ್ ತಲುಪಿದೆ. ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ, ಕೇರಳ ತಂಡ, ಮಹಾರಾಷ್ಟ್ರ ತಂಡವನ್ನು 2-1 ಗೋಲುಗಳ ಅಂತರದಿಂದ ಸೋಲಿಸಿ, ಪ್ರಶಸ್ತಿ ಸುತ್ತಿಗೆ ಕಾಲಿಟ್ಟಿತು.
ಈಗಾಗಲೇ ಐದು ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿರುವ ಕೇರಳ ತಂಡ, ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ತಂಡವಾದ ಸರ್ವೀಸಸ್ ಅಥವಾ ಪಂಜಾಬ್ ತಂಡವನ್ನು ಎದುರಿಸಲಿದೆ. ಮಾ. 3ರಂದು ಫೈನಲ್ ಪಂದ್ಯ ನಡೆಯಲಿದೆ.