ಜಲಂಧರ್: ಜೇಪಿ ಪಂಜಾಬ್ ವಾರಿಯರ್ಸ್ ಹಾಗೂ ಉತ್ತರ ಪ್ರದೇಶ ವಿಝಾರ್ಡ್ಸ್ ತಂಡಗಳ ನಡುವೆ ಮಂಗಳವಾರ ನಡೆದ ಎಚ್‌ಐಎಲ್ ಹಾಕಿ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಉಭಯ ತಂಡಗಳು ತಲಾ 2 ಗೋಲು ಗಳಿಸಿದವು.
ಶಿವೇಂದ್ರ ಸಿಂಗ್ ಹಾಗೂ ಮಾಲಕ್ ಸಿಂಗ್ ಇಬ್ಬರೂ ವಾರಿಯರ್ಸ್ ಪರವಾಗಿ ಗೋಲು ಗಳಿಸಿ 2-0 ಮುನ್ನಡೆಯನ್ನು ತಮ್ಮ ತಂಡಕ್ಕೆ ಒದಗಿಸಿಕೊಟ್ಟಿದ್ದರು.
ಆದರೆ, ಉತ್ತರ ಪ್ರದೇಶದ ಸ್ಟಾರ್ ಆಟಗಾರ ವಿ.ಆರ್. ರಘುನಾಥ್ ಅವರು ತಮಗೆ ಸಿಕ್ಕ ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ತಂಡಕ್ಕೆ 2 ಗೋಲುಗಳನ್ನು ತಂದಿತ್ತರು. ಇದರಿಂದಾಗಿ, ಉತ್ತರ ಪ್ರದೇಶ ಪಂದ್ಯದಲ್ಲಿ 2-2ರ ಸಮಬಲ ಸಾಧಿಸಿತು.
ಪಂದ್ಯದ ಮುಗಿಯುವವರೆಗೂ ಇದೇ ಸಮಬಲ ಮುಂದುವರೆದ ಹಿನ್ನೆಲೆಯಲ್ಲಿ, ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು.