ಕ್ರೀಡೆ

ಕಿವೀಸ್ಗೆ ಜಯ ತಂದ ವಿಲಿಯಮ್ಸನ್

ಕಿಂಬರ್ಲಿ: ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ 27 ರನ್ಗಳಿಂದ ಜಯ ಗಳಿಸಿದೆ. ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್, ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 279 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ, 49.1 ಓವರ್ಗಳಲ್ಲಿ 252 ರನ್ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 27 ರನ್ಗಳ ಅಂತರದಲ್ಲಿ ಶರಣಾಯಿತು.  ಈ ಜಯದಿಂದಾಗಿ, ನ್ಯೂಜಿಲೆಂಡ್ ತಂಡ, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸತತ ಎರಡು ಜಯ ದಾಖಲಿಸಿ, ಸರಣಿಯನ್ನು ಗೆದ್ದುಕೊಂಡಿದೆ.
ಆಸರೆಯಾದ ವಿಲಿಯಮ್ಸನ್: ಟಾಸ್ ಗೆದ್ದಿದ್ದ ದಕ್ಷಿಣ ಆಫ್ರಿಕಾ ತಂಡ ಮೊದಲು ನ್ಯೂಜಿಲೆಂಡ್ ತಂಡವನ್ನು ಬ್ಯಾಟಿಂಗ್ಗೆ ಇಳಿಸಿತು.  ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ಶೂನ್ಯ ಮೊತ್ತಕ್ಕೇ ಆರಂಭಿಕ ಗುಪ್ಟಿಲ್ ಅವರನ್ನು ಕಳೆದುಕೊಂಡಿತು. ಮತ್ತೊಬ್ಬ ಆರಂಭಿಕ ವಾಟ್ಲಿಂಗ್ ಹಾಗೂ ವಿಲಿಯಮ್ಸನ್ ಅವರು ಎರಡನೇ ವಿಕೆಟ್ಗೆ 32 ರನ್ ಸೇರಿಸಿದರು. 13ನೇ ಓವರ್ನಲ್ಲಿ ವಾಟ್ಲಿಂಗ್ ವಿಕೆಟ್ ಉರುಳಿದ ಮೇಲೆ, ವಿಲಿಯಮ್ಸನ್ಗೆ ಜೋಡಿಯಾದ ಈಲಿಯಟ್ 3ನೇ ವಿಕೆಟ್ಗೆ 127 ರನ್ ಸೇರಿಸಿತು. ವೈಯಕ್ತಿಕವಾಗಿ 48 ರನ್ ಗಳಿಸಿದ್ದ ಈಲಿಯಟ್ ಇನಿಂಗ್ಸ್ನ 34ನೇ ಓವರ್ನಲ್ಲಿ ಕ್ಲೆನ್ವೆಲ್ಟ್ ಅವರ ಬೌಲಿಂಗ್ನಲ್ಲಿ ಡಿ ಕಾಕ್ ಅವರಿಗೆ ಕ್ಯಾಚ್ ನೀಡಿ ಶತಕ ವಂಚಿತರಾದರು. ಈಲಿಯಟ್ ಔಟಾದ ನಂತರ ವಿಲಿಯಮ್ಸನ್ ಶತಕ ಬಾರಿಸಿ ತಂಡ ಉತ್ತಮ ಮೊತ್ತ ಪೇರಿಸಲು ನೆರವಾದರು.
ಹರಿಣಗಳ ವೈಫಲ್ಯ: ನ್ಯೂಜಿಲೆಂಡ್ ನೀಡಿದ್ದ ಸವಾಲಿನ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಸಾವಧಾನವಾಗಿ ಆಡಿದ್ದರೆ ಪಂದ್ಯವನ್ನು ಗೆಲ್ಲಬಹುದಿತ್ತು. ಆದರೆ, ಆಟಗಾರರ ಅವಸರದಿಂದಾಗಿ ಅಪಜಯದ ಹಾದಿಗೆ ಹೆಜ್ಜೆ ಹಾಕಿದಂತಾಯಿತು.
ದಕ್ಷಿಣ ಆಫ್ರಿಕಾ ಇನಿಂಗ್ಸ್ನಲ್ಲಿ ಆದ ಒಟ್ಟು 5 ರನೌಟ್ಗಳು ತಂಡಕ್ಕೆ ಮುಳುವಾದವು. ಆರಂಭಿಕ ಸ್ಮಿತ್, ಡು ಪ್ಲೆಸಿಸ್, ಬೆಹರ್ದಿನ್, ಮಿಲ್ಲರ್, ಕ್ಲೆನ್ವೆಲ್ಟ್ ಅವರುಗಳು ರನೌಟ್ ಆದರು. ಆರಂಭಿಕ ಸ್ಮಿತ್ ಹಾಗೂ ಮೂರನೇ ಕ್ರಮಾಂಕದ ಇಂಗ್ರಾಮ್ ಇಬ್ಬರ ಅರ್ಧ ಶತಕಗಳು ಇನಿಂಗ್ಸ್ಗೆ ನೆರವಾದವಾದರೂ, ನಂತರದ ಬ್ಯಾಟ್ಸ್ಮನ್ಗಳು ವೈಫಲ್ಯ ಅನುಭವಿಸಿದರು.  ಅಂತಿಮವಾಗಿ ದಕ್ಷಿಣ ಆಫ್ರಿಕಾ 49.1 ಓವರ್ಗಳಲ್ಲಿ 252 ರನ್ ಪೇರಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್ಗಳನ್ನೂ ಕಳೆದುಕೊಂಡಿತು.

ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್: 279/8 (50 ಓವರ್)
ವಿಲಿಯಮ್ಸನ್ ಅಜೇಯ 145 (136)
ಈಲಿಯಟ್ 48 (63)
ಬೌಲಿಂಗ್: ಮಾರ್ಕೆಲ್ 71/3, ಸೋಟ್ಸೋಬ್ 38/2
ದಕ್ಷಿಣ ಆಫ್ರಿಕಾ: 252/10 (49.1 ಓವರ್)
ಬೌಲಿಂಗ್: ಮಿಲ್ಸ್ 28/2, 51/1
ಪಂದ್ಯಶ್ರೇಷ್ಠ: ವಿಲಿಯಮ್ಸನ್ (ನ್ಯೂಜಿಲೆಂಡ್)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video