ಕ್ರೀಡೆ

ಮಿಶ್ರ ಡಬಲ್ಸ್ನಿಂದ ಬೋಪಣ್ಣ ಹೊರಕ್ಕೆ

ಮೆಲ್ಬರ್ನ್: ಈ ಬಾರಿಯ ಆಸ್ಟ್ರೇಲಿಯನ್ ಓಪನ್ನಲ್ಲಿ ಭಾರತದ ರೋಹನ್ ಬೋಪಣ್ಣ ಅವರ ಮಿಶ್ರ ಡಬಲ್ಸ್ನಲ್ಲಿ ಅಭಿಯಾನ ಅಂತ್ಯಗೊಂಡಿದೆ. ಮಂಗಳವಾರ ನಡೆದ ಮಿಶ್ರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು ಹಾಗೂ ಅವರ ಚೀನಾ ತೈಪೈ ಜೊತೆಗಾತಿ ಸು- ವೈ, ಚೆಕ್- ಪೋಲೆಂಡ್ ಜೋಡಿಯಾದ ಕ್ವೇಟಾ ಪೆಚಕೆ ಹಾಗೂ ಮಾರ್ಸಿನ್ ಮಾಟ್ಕೊಸ್ಕಿ ಜೋಡಿ ವಿರುದ್ಧ 2-6, 3-6 ಅಂತರದಲ್ಲಿ ಪರಾಭವ ಹೊಂದಿದರು. 56 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಚೆಕ್- ಪೋಲೆಂಡ್ ಜೋಡಿ ರಾರಾಜಿಸಿತು. ಆರಂಭದಿಂದ ಅಂತ್ಯದವರೆಗೂ ರೋಹನ್- ಸು ವೈ ಜೋಡಿ ಮೇಲೆ ಹಿಡಿತ ಸಾಧಿಸಿದ ಅವರಿಬ್ಬರೂ ಮೊದಲಸೆಟ್ನಲ್ಲಿ ಸುಲಭ ಜಯ ಸಂಪಾದಿಸಿದರು.  ಆನಂತರ, ದ್ವಿತೀಯ ಸೆಟ್ನ ಆರಂಭದಲ್ಲಿ ರೋಹನ್ ಹಾಗೂ ಸು ವೈ ಇಬ್ಬರೂ ತಿರುಗೇಟು ನೀಡಲು ಪ್ರಯತ್ನಿಸಿದರಾದರೂ, ಎದುರಾಳಿಗಳ ಮಿಂಚಿನ ಆಟದ ಮುಂದೆ ಇವರ ಪ್ರಯತ್ನಗಳು ಫಲ ನೀಡಲಿಲ್ಲ. ಈ ಸೆಟ್ನಲ್ಲೂ ಕ್ವೇಟಾಪೆಚಾಕೆ ಹಾಗೂ ಮಾರ್ಸಿನ್ ಜೋಡಿಯ ಕೈ ಮೇಲಾಯಿತು. 6-3ರ ಅಂತರದಲ್ಲಿ ಚೆಕ್-ಪೊಲೆಂಡ್ ಜೋಡಿ ಎದುರು ರೋಹನ್-ಸು ವೈ ಜೋಡಿ ಸೋಲು ಕಾಣುವ ಮೂಲಕ ಪಂದ್ಯದಲ್ಲೂ ಪರಾಭವಗೊಂಡಿತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

SIR ಅಕ್ರಮ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ