ಮೆಲ್ಬರ್ನ್: ಅಮೆರಿಕಾದ ಬ್ರಯಾನ್ ಸಹೋದರರು ಈ ಬಾರಿಯ ಆಸ್ಟ್ರೇಲಿಯನ್ ಓಪನ್ ಟೆನಿಸ್ ಪಂದ್ಯಾವಳಿಯ ಪುರುಷರ ಡಬಲ್ಸ್ ವಿಭಾಗದ ಸೆಮಿಫೈನಲ್ ತಲುಪಿದ್ದಾರೆ. ಬುಧವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೈಕ್ ಬ್ರಯಾನ್ ಹಾಗೂ ಬಾಬ್ ಬ್ರಯಾನ್ ಜೋಡಿ, ಬ್ರಾಸಿಯಾಲಿ ಹಾಗೂ ಲೌಹಿ ಜೋಡಿಯನ್ನು 6-3, 7-5 ಅಂತರದಲ್ಲಿ ಸೋಲಿಸಿ, ಸೆಮಿಫೈನಲ್ಗೆ ಕಾಲಿಟ್ಟಿತು.
ಬೊಲೆಲೋ- ಫಾಗಿನಿಗೆ ಜಯ: ಬುಧವಾರ ನಡೆದ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ, ಬೊಲೆಲಿ- ಫಾಗಿನಿ ಜೋಡಿ, ಕ್ಯಾಬಲ್ ಹಾಗೂ ಫರಾಹ್ ಜೋಡಿ ವಿರುದ್ಧ 6-1, 4-6, 3-6 ಅಂತರದಲ್ಲಿ ಜಯ ಸಾಧಿಸಿ, ಉಪಾಂತ್ಯಕ್ಕೆ ಕಾಲಿಟ್ಟಿತು.
ಎರ್ರಾನಿ ಜೋಡಿಗೆ ಜಯ: ಎರ್ರಾನಿ ಹಾಗೂ ವಿಂಚಿ ಜೋಡಿ, ಮಹಿಳೆಯರ ಡಬಲ್ಸ್ ವಿಭಾಗದ ಫೈನಲ್ ತಲುಪಿದೆ. ಬುಧವಾರ ನಡೆದ ಪಂದ್ಯದಲ್ಲಿ, ಈ ಜೋಡಿ, ಮಕಾರೊವಾ ಹಾಗೂ ವೆಸ್ನಿನಾ ಜೋಡಿಯನ್ನು 6-2, 6-4 ಅಂತರದಲ್ಲಿ ಸೋಲಿಸಿತು.