ಮೆಲ್ಬರ್ನ್: ಅಗ್ರ ಶ್ರೇಯಾಂಕ ಪಡೆದಿರುವ ಸರಾ ಎರ್ರಾನಿ ಮತ್ತು ರಾಬರ್ಟ್ ವಿನ್ಸಿ ಜೋಡಿ ಆಸ್ಟ್ರೇಲಿಯಾ ಓಪನ್ ಟೆನಿಸ್ ಚಾಂಪಿಯನ್ಷಿಪ್ನ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಇಟಲಿಯ ಈ ಜೋಡಿ ಒಂದೂವರೆ ಗಂಟೆ ನಡೆದ ಫೈನಲ್ ಪಂದ್ಯದಲ್ಲಿ ಸ್ಥಳೀಯ ಜೋಡಿ ಆಶ್ಲೇ ಬಾರ್ಟಿ ಮತ್ತು ಕೆಸೀ ಡೆಲ್ಲಾಖ್ಯು ಜೋಡಿಯನ್ನು 6-2, 3-6, 6-2 ಸೆಟ್ಗಳಿಂದ ಪರಾಭವಗೊಳಿಸಿತು.