ಕ್ರೀಡೆ

ಮ'ರ್ರೆ'ಯಾದ ಫೆಡರರ್

ಮೆಲ್ಬರ್ನ್: ಗ್ರಾನ್ ಸ್ಲ್ಯಾಮ್ ದಿಗ್ಗಜ ಸ್ವಿಜರ್ಲೆಂಡ್ನ ರೋಜರ್ ಫೆಡರರ್ ಅವರನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ ಓಪನ್ ಟೆನಿಸ್ ಚಾಂಪಿಯನ್ಷಿಪ್ನ ಪುರುಷರ ಸಿಂಗಲ್ಸ್ನ ಫೈನಲ್ ಪ್ರವೇಶಿಸುವಲ್ಲಿ ಇಂಗ್ಲೆಂಡ್ನ ಆ್ಯಂಡಿ ಮರ್ರೆ ಯಶಸ್ವಿಯಾಗಿದ್ದಾರೆ.
ಹೀಗಾಗಿ ಅವರು ಈಗ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಹ್ಯಾಟ್ರಿಕ್ ಕನಸು ಕಾಣುತ್ತಿರುವ ಹಾಲಿ ಚಾಂಪಿಯನ್ ಸರ್ಬಿಯಾದ ನೋವಾಕ್ ಜೊಕೊವಿಚ್ ಅವರನ್ನು ಎದುರಿಸಲಿದ್ದಾರೆ.
ನಾಲ್ಕು ಗಂಟೆಗಳ ಕಾಲ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮರ್ರೆ ಅವರು ಫೆಡರರ್ ವಿರುದ್ಧ  6-4, 6-7 (5/7), 6-3, 6-7 (2/7), 6-2 ಸೆಟ್ಗಳ ಅಂತರದಿಂದ ವಿಜಯ ಸಾಧಿಸಿದರು. ಇದರೊಂದಿಗೆ ಮರ್ರೆ, ಮೂರನೇ ಬಾರಿಗೆ ಆಸ್ಟ್ರೇಲಿಯಾ ಓಪನ್ ಫೈನಲ್ ಪ್ರವೇಶಿಸಿದ್ದಾರೆ.
17 ಗ್ರಾನ್ ಸ್ಲ್ಯಾಮ್ ಪ್ರಶಸ್ತಿ ಗೆದ್ದ ಫೆಡರರ್ ವಿರುದ್ಧ, ಇದೇ ಮೊದಲ ಬಾರಿಗೆ ಗ್ರಾನ್ ಸ್ಲ್ಯಾಮ್ ಪಂದ್ಯಾವಳಿಯಲ್ಲಿ ಜಯಿಸಿದ ಮರ್ರೆ, ಮೂರು ಬಾರಿ ಆಸ್ಟ್ರೇಲಿಯಾ ಓಪನ್ ಫೈನಲ್ ಪ್ರವೇಶಿಸಿದ ಇಂಗ್ಲೆಂಡ್ ಟೆನಿಸ್ ತಾರೆ ಎನಿಸಿದರು. ಅಲ್ಲದೆ ಮರ್ರೆ ಅವರಿಗೆ ಇದು 6ನೇ ಗ್ರಾನ್ ಸ್ಲ್ಯಾಮ್ ಫೈನಲ್ ಆಗಿದೆ.
ಮೊದಲ ಸೆಟ್ನಲ್ಲಿ ಮರ್ರೆ ಮೇಲುಗೈ ಸಾಧಿಸಿದರೆ, ನಂತರ 2ನೇ ಸೆಟ್ನಲ್ಲಿ ಫೆಡರರ್ ಮೇಲುಗೈ ಸಾಧಿಸಿದರು. ನಂತರ 3ನೇ ಸೆಟ್ನಲ್ಲಿ ಮರ್ರೆ ಜಯ ಸಾಧಿಸಿದರು. ನಂತರ ನಾಲ್ಕನೇ ಸೆಟ್ನಲ್ಲಿ ಮತ್ತೆ ಫೆಡರರ್ ಗೆದ್ದುಕೊಂಡರು. ಆದರೆ, ನಿರ್ಣಾಯಕ ಐದನೇ ಸೆಟ್ನಲ್ಲಿ ವೈಫಲ್ಯ ಕಂಡ ಫೆಡರರ್ ಪಂದ್ಯವನ್ನು ಎದುರಾಳಿಗೆ ಬಿಟ್ಟುಕೊಟ್ಟರು.
ಇನ್ನು ಮಿಶ್ರ ಡಬಲ್ಸ್ ವಿಭಾಗದಲ್ಲಿ ಆಸ್ಟ್ರೇಲಿಯಾದ ಜರ್ಮೈಲಾ ಗಾಜಿಸೋವಾ ಮತ್ತು ಮ್ಯಾಥ್ಯೂ ಎಬ್ಡನ್ ಜೋಡಿ ಫೈನಲ್ ಪ್ರವೇಶಿಸಿದೆ. ಸೆಮಿಫೈನಲ್ ಪಂದ್ಯದಲ್ಲಿ ಕಝಕಿಸ್ತಾನ ಮತ್ತು ಉಜ್ಬೇಕಿಸ್ತಾನದ ಜೋಡಿ ಯರೋಸ್ಲೋವಾ ಶೇಡೋವಾ ಮತ್ತು ಇಸ್ತೋಮಿನಿ ಜೋಡಿಯನ್ನು 7-5, 7-6 (7/5) ನೇರ ಸೆಟ್ಗಳ ಅಂತರದಿಂದ ಪರಾಭವಗೊಳಿಸಿತು. ಫೈನಲ್ ಪಂದ್ಯದಲ್ಲಿ ಈ ಜೋಡಿ ಚೆಕ್ ಗಣರಾಜ್ಯದ ಲೂಸಿಯಾ ರಾಡೆಕಾ ಮತ್ತು ಫ್ರಾಟಿಸೆಕ್ ಸೆರ್ಮಾಕ್ ಜೋಡಿಯನ್ನು ಎದುರಸಲಿದೆ. ಶನಿವಾರ ನಡೆಯಲಿರುವ ಪುರುಷರ ಡಬಲ್ಸ್ ಪಂದ್ಯದಲ್ಲಿ ಅಮೆರಿಕದ ಸೋದರ ಜೋಡಿಯಾದ ಬಾಬ್ ಮತ್ತು ಮೈಕ್ ಬ್ರಿಯಾನ್ ಅವರು ರಾಬಿನ್ ಹಾಸೆ ಮತ್ತು ಇಗೋರ್ ಸಿಜಸ್ಲಿಂಗ್ ಜೋಡಿಯನ್ನು ಎದುರಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

'SIR' ವಿರುದ್ಧ ಭಾರೀ ಪ್ರತಿಭಟನೆ: ಜ್ಞಾನೇಶ್ ಕುಮಾರ್ Z+ ಭದ್ರತೆ ಮತ್ತಷ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ!

ಚಲಿಸುತ್ತಿದ್ದ ಬಸ್`ನಲ್ಲೇ ವೃದ್ಧನ 'ಮೈ ಬಿಸಿ ಏರಿಸಿ', 1 ಕೋಟಿ ರೂ ಮೌಲ್ಯದ ಚಿನ್ನ ಎಗರಿಸಿದ 'ಖತರ್ನಾಕ್ ಕಳ್ಳಿಯರು', Video

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ CWRC ಮತ್ತೆ ಶಾಕ್: ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಸೂಚನೆ