ನವದೆಹಲಿ: ದಕ್ಷಿಣ ಕೊರಿಯಾದಲ್ಲಿ ಜನವರಿ 29ರಿಂದ ನಡೆಯಲಿರುವ ಚಳಿಗಾಲದ ವಿಶೇಷ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಭಾರತ 58 ಕ್ರೀಡಾಪಟುಗಳ ದಂಡನ್ನು ಕಳುಹಿಸಿಕೊಡುತ್ತಿದೆ. ಇದೇ ಮೊದಲ ಬಾರಿಗೆ ಹೆಚ್ಚಿನ ಕ್ರೀಡಾಪಟುಗಳನ್ನೊಳಗೊಂಡ ತಂಡವನ್ನು ಭಾರತ ಕಳುಹಿಸಿಕೊಡುತ್ತಿದೆ.
ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ವಿಶೇಷ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ವಿಕಲಚೇತನ ಕ್ರೀಡಾಪಟುಗಳೊಂದಿಗೆ 15 ಕೋಚ್ಗಳು ಮತ್ತು ಅಧಿಕಾರಿಗಳುಸೇರಿದಂತೆ ಒಟ್ಟು 79 ಕ್ರೀಡಾಪಟುಗಳು ತೆರಳಲಿದ್ದಾರೆ.
ಕಳೆದ ಬಾರಿ 7 ಚಿನ್ನ ಸೇರಿದಂತೆ 15 ಪದಕಗಳನ್ನು ಗೆದ್ದಿರುವ ಭಾರತ ಈ ಬಾರಿ ಇನ್ನಷ್ಟು ಹೆಚ್ಚಿನ ಸಾಧನೆ ಮಾಡುವ ಸಾಧ್ಯತೆಗಳಿವೆ.