ಕ್ರೀಡೆ

ಪಾಕಿಸ್ತಾನ ತಂಡಕ್ಕೆ ವಾಸ್ತವ್ಯ: ಬಿಸಿಸಿಐ ಮೇಲೆ ಟೀಕಾ ಪ್ರಹಾರ

ಕರಾಚಿ: ಈ ಬಾರಿಯ ಮಹಿಳಾ ವಿಶ್ವಕಪ್‌ನಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನ ಮಹಿಳಾ ತಂಡಕ್ಕೆ ಕಟಕ್‌ನಲ್ಲಿನ ಕ್ರೀಡಾಂಗಣದಲ್ಲೇ ವಾಸ್ತವ್ಯದ ಅನುಕೂಲ ಕಲ್ಪಿಸಿರುವ ಬಿಸಿಸಿಐ ನಿರ್ಧಾರದ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟರ್‌ಗಳು ಕಿಡಿ ಕಾರಿದ್ದಾರೆ.
ಭಾರತದಲ್ಲಿ ನಡೆಯುವ ಯಾವುದೇ ಪಂದ್ಯಾವಳಿಗಳಲ್ಲಿ ಪಾಕಿಸ್ತಾನದ ಕ್ರಿಕೆಟರ್‌ಗಳು ಭಾಗವಹಿಸಲು ಅನುಕೂಲ ನೀಡಬಾರದೆಂದು ಆಗ್ರಹಿಸಿ, ಕೆಲ ಸಂಘಟನೆಗಳು ಸತ್ಯಾಗ್ರಹ ಮಾಡುತ್ತಿರುವ ಹಿನ್ನೆಲೆಯಲ್ಲಿ, ಭದ್ರತೆಯ ದೃಷ್ಟಿಯಿಂದ ಪಾಕಿಸ್ತಾನ ತಂಡ ಅಭ್ಯಾಸ ನಡೆಸುತ್ತಿರುವ ಕಟಕ್ ಕ್ರೀಡಾಂಗಣದಲ್ಲೇ ವಾಸ್ತವ್ಯ ಕಲ್ಪಿಸಲಾಗಿದೆ.
ಆದರೆ, ಬಿಸಿಸಿಐನ ಈ ಕ್ರಮವನ್ನು ಉಗ್ರವಾಗಿ ಟೀಕಿಸಿರುವ ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರರಾದ ಅಬ್ದುಲ್ ಖಾದಿರ್, ರಶೀದ್ ಲತೀಫ್, 'ಎರಡೂ ದೇಶಗಳ ನಡುವೆ ಪುನಃ ಕ್ರೀಡಾ ಬಾಂಧವ್ಯ ಆರಂಭಿಸಲು ನಾವು ಉತ್ಸುಕರಾಗಿದ್ದೇವೆ. ಆದರೆ, ಭಾರತದಲ್ಲಿನ ರಾಜಕೀಯ ವ್ಯವಸ್ಥೆ ಇದಕ್ಕೆ ಅವಕಾಶ ನೀಡುತ್ತಿಲ್ಲ. ಆದರೂ, ನಮ್ಮ ಕ್ರೀಡಾಳುಗಳನ್ನು ಹೋಟೆಲ್‌ನಲ್ಲಿಡದೇ ಕ್ರೀಡಾಂಗಣದಲ್ಲಿ ಇರಿಸಿರುವುದು ಖಂಡನಾರ್ಹ. ಆಟಗಾರರಿಗೆ ಭದ್ರತೆ ನೀಡುವಲ್ಲಿ ಬಿಸಿಸಿಐಗೇ ನಂಬಿಕೆ ಇಲ್ಲ' ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

‘ಪ್ರೇಮದ ಊರಲಿ’ ಭರ್ಜರಿ ಕಲೆಕ್ಷನ್: ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 39 ಕೋಟಿ ರೂ. ಗಳಿಕೆ!

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?

ನವೆಂಬರ್‌ನಲ್ಲಿ ಕರ್ನಾಟಕ ಬಿಜೆಪಿಗೆ ಮೇಜರ್ ಸರ್ಜರಿ: ಬಿವೈ ವಿಜಯೇಂದ್ರ, ಆರ್ ಅಶೋಕಗೆ ಗೇಟ್ ಪಾಸ್?; ಹೊಸ ಮುಖಗಳಿಗೆ ಮಣೆ!