ಕ್ರೀಡೆ

ಲಂಕಾಕ್ಕೆ ಗೆಲುವು ತಂದ ವೀರಕ್ಕೋಡಿ

ಮುಂಬೈ: ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ನಡುವಿನ ಮಹಿಳಾ ವಿಶ್ವಕಪ್ ಅಭ್ಯಾಸದ ಪಂದ್ಯದಲ್ಲಿ ಶ್ರೀಲಂಕಾ ತಂಡ 2 ವಿಕೆಟ್‌ಗಳಿಂದ ಜಯ ಗಳಿಸಿದೆ. ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ, 45.2 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನೂ ಕಳೆದುಕೊಂಡು 164 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ನಂತರ, ಬ್ಯಾಟಿಂಗ್‌ಗೆ ಇಳಿದ ಶ್ರೀಲಂಕಾ ತಂಡ 44.3 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 167 ರನ್  ಗಳಿಸಿ ಜಯ ಸಾಧಿಸಿತು.
ಪ್ರೀಜ್ ಶತಕಾರ್ಧ: ಟಾಸ್ ಗೆದ್ದಿದ್ದ ಶ್ರೀಲಂಕಾ, ದಕ್ಷಿಣ ಆಫ್ರಿಕಾವನ್ನು  ಮೊದಲು ಬ್ಯಾಟಿಂಗ್‌ಗೆ ಇಳಿಸಿತು. ಆದರೆ, ನಿರೀಕ್ಷಿತ ಆರಂಭ ಹರಿಣಗಳಿಗೆ ದೊರಕಲಿಲ್ಲ. ಆರಂಭಿಕರಾದ ಫ್ರಿಟ್ಸ್ ಹಾಗೂ ಚೆಟ್ಟಿ ಇಬ್ಬರೂ ಉತ್ತಮ ಅಡಿಪಾಯ ಹಾಕಲು ವಿಫಲರಾದರು. ಆದರೆ, ಮಧ್ಯಮ ಕ್ರಮಾಂಕದ ಡು ಪ್ರೀಜ್ ಅವರು ಶತಕಾರ್ಧ ಗಳಿಸಿ, ತಂಡವನ್ನು ಕುಸಿತದಿಂದ ಪಾರು ಮಾಡಿದರು. ನಂತರ, ವ್ಯಾನ್ ನೇಕರ್ಕ್ ಅವರ 46 ರನ್‌ಗಳು ದಕ್ಷಿಣ ಆಫ್ರಿಕಾದ ಸಹಾಯಕ್ಕೆ ಬಂದವು. ಈ ಇಬ್ಬರನ್ನು ಬಿಟ್ಟರೆ ದಕ್ಷಿಣ ಆಫ್ರಿಕಾದ ಯಾವೊಬ್ಬ ಬ್ಯಾಟ್ಸ್‌ಮನ್ ಸಹ ಹೆಚ್ಚು ಆಡಲೇ ಇಲ್ಲ. ಅಂತಿಮವಾಗಿ, ದಕ್ಷಿಣ ಆಫ್ರಿಕಾ 45.2 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನೂ ಕಳೆದುಕೊಂಡು ಕೇವಲ 164 ರನ್ ಮಾತ್ರ ಗಳಿಸಿತು.
ಜಯ ತಂದ ವೀರಕ್ಕೋಡಿ: ದಕ್ಷಿಣ ಆಫ್ರಿಕಾದ ಇನಿಂಗ್ಸ್‌ಗೆ ಆರಂಭದಲ್ಲೇ ಪೆಟ್ಟು ಕೊಟ್ಟಿದ್ದ ಶ್ರೀಲಂಕಾದ ಆರಂಭವೇನೂ ವಿಭಿನ್ನವಾಗಿರಲಿಲ್ಲ. ಅದೂ ಸಹಾ ಆರಂಭದಲ್ಲೇ ಪೆಟ್ಟು ತಿಂದಿತು. ಕೇವಲ 15 ರನ್ ಮೊತ್ತಕ್ಕೇ ತನ್ನ ಮೊದಲ ವಿಕೆಟ್ ಕಳೆದುಕೊಂಡ ಶ್ರೀಲಂಕಾ, ಆನಂತರ, ನಿಗದಿತ ಅಂತರದಲ್ಲಿ ವಿಕೆಟ್‌ಗಳನ್ನು ಕೈ ಚೆಲ್ಲುತ್ತಾ ಹೋಯಿತು. ಮಧ್ಯಮ ಕ್ರಮಾಂಕದ ಕೌಶಲ್ಯ 22 ರನ್ ಗಳಿಸಿದ್ದು ಬಿಟ್ಟರೆ, ಮತ್ಯಾವ ಆಟಗಾರ್ತಿಯರೂ 20 ರನ್ ಗಡಿ ದಾಟಲೇ ಇಲ್ಲ. ಆದರೆ, ಈ ಹಂತದಲ್ಲಿ ಶ್ರೀಪಾಲಿ ವೀರಕ್ಕೋಡಿ ಅವರ ಅಮೋಘ ಬ್ಯಾಟಿಂಗ್ ತಂಡವನ್ನು ಸೋಲಿನಿಂದ ಪಾರು ಮಾಡಿತು. ಪಂದ್ಯದ ಕೊನೆಯವರೆಗೂ ಅಜೇಯರಾಗಿ ಉಳಿದ ಅವರು, 65 ಎಸೆತಗಳಲ್ಲಿ 54 ರನ್ ಬಾರಿಸಿ, ತಂಡಕ್ಕೆ ಗೆಲುವನ್ನು ತಂದುಕೊಟ್ಟರು. ಅಂತಿಮವಾಗಿ, 44.3 ಓವರ್‌ಗಳಲ್ಲಿ ಶ್ರೀಲಂಕಾ ತಂಡ 8 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿ ವಿಜಯದ ನಗೆ ಬೀರಿತು.

ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ:
164 (45.2 ಓವರ್)
ಡು ಪ್ರೀಜ್ 59 (84), ನೇಕೆರ್ಕ್ 46 (96)
ಬೌಲಿಂಗ್: ಕೌಶಲ್ಯ 29/3, ಶ್ರೀಪಾಲಿ ವೀರಕ್ಕೋಡಿ 19/2
ಶ್ರೀಲಂಕಾ: 167/8 (44.3 ಓವರ್)
ಶ್ರೀಪಾಲಿ ವೀರಕ್ಕೋಡಿ ಅಜೇಯ 54 (65),
ಕೌಶಲ್ಯ 22 (37)
ಬೌಲಿಂಗ್: ನೀಕೆರ್ಕ್ 24/3, ಬೆನಾಡೆ 18/1

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

‘ಪ್ರೇಮದ ಊರಲಿ’ ಭರ್ಜರಿ ಕಲೆಕ್ಷನ್: ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 39 ಕೋಟಿ ರೂ. ಗಳಿಕೆ!

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?

ನವೆಂಬರ್‌ನಲ್ಲಿ ಕರ್ನಾಟಕ ಬಿಜೆಪಿಗೆ ಮೇಜರ್ ಸರ್ಜರಿ: ಬಿವೈ ವಿಜಯೇಂದ್ರ, ಆರ್ ಅಶೋಕಗೆ ಗೇಟ್ ಪಾಸ್?; ಹೊಸ ಮುಖಗಳಿಗೆ ಮಣೆ!