ಕಟಕ್: ಮಹಿಳಾ ವಿಶ್ವಕಪ್ ಕ್ರಿಕೆಟ್ ಪಂದ್ಯಗಳು ನಡೆಯಲಿರುವ ಇಲ್ಲಿನ ಬಾರಾಬತಿ ಸ್ಟೇಡಿಯಂನಲ್ಲಿ ವೀಕ್ಷಕರು ಮೊಬೈಲ್ ತೆಗೆದುಕೊಂಡು ಹೋಗುವುದಕ್ಕೆ ನಿರ್ಬಂಧ ಹೇರಲಾಗಿದೆ. ನಿಯಮಾವಳಿಯ ಪ್ರಕಾರ ಸ್ಟೇಡಿಯಂನಲ್ಲಿ ಮೊಬೈಲ್, ಕನ್ನಡಿ, ತಿಂಡಿ ತಿನಿಸುಗಳು, ಪಟಾಕಿ, ಗ್ಲಾಸ್, ಪ್ಲಾಸ್ಟಿಕ್ ಬಾಟಲಿಗಳು, ನೀರಿನ ಪಾಕೆಟ್, ಹೆಲ್ಮೆಟ್ ತರುವಂತಿಲ್ಲ.