ಪ್ಯಾರಿಸ್: ವಿಶ್ವದ ಅತಿ ವೇಗದ ಓಟಗಾರ ಜಮೈಕಾದ ಉಸೇನ್ ಬೋಲ್ಟ್ ಅವರು, ಭಾನುವಾರ ನಡೆದ ಪ್ಯಾರಿಸ್ ಡೈಮೆಂಡ್ ಲೀಗ್ ಓಟದ ಸ್ಪರ್ಧೆಯಲ್ಲಿ ಮೊದಲಿಗರಾಗಿ ಹೊರಹೊಮ್ಮಿದ್ದಾರೆ.
ಸ್ಪರ್ಧೆಯಲ್ಲಿ ತಮ್ಮ ನೇರ ಪ್ರತಿಸ್ಪರ್ಧಿಯಾಗಿದ್ದ ಅಮೆರಿಕದ ಟೈಸನ್ ಗೇ ಅವರನ್ನು ಹಿಂದಿಕ್ಕಿದ ಬೋಲ್ಟ್, ನಿಗದಿತ 200 ಮೀ. ದೂರವನ್ನು 19.73 ಸೆಕೆಂಡ್ಗಳಲ್ಲಿ ಕ್ರಮಿಸಿ, ಮೊದಲಿಗರಾಗಿ ಹೊರಹೊಮ್ಮಿದರು. 200 ಮೀ. ಸ್ಪರ್ಧೆಯಲ್ಲಿ ಬೋಲ್ಟ್ ಈ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಒಲಿಂಪಿಕ್ಸ್ನಲ್ಲಿ ಎರಡು ಬಂಗಾರದ ಪದಕಗಳನ್ನು ಗೆದ್ದಿರುವ ಅವರು, 26 ವರ್ಷದ ಬೋಲ್ಟ್ ಅವರು, ಭಾನುವಾರದ ಸ್ಪರ್ಧೆಯಲ್ಲಿ ಎಲ್ಲರ ಗಮನ ಸೆಳೆದರು. ಈ ಸ್ಪರ್ಧೆಯಲ್ಲಿ ಸಾಧಿಸಿದ ಗೆಲವಿನಿಂದಾಗಿ, ಬೋಲ್ಟ್ ಅವರು, ಮುಂದಿನ ವರ್ಷ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ನಲ್ಲಿ ಭಾಗವಹಿಸುವ ಅವಕಾಶಗಳನ್ನು ಹೆಚ್ಚಿಸಿದೆ. ಸ್ಪರ್ಧೆಯ ನಂತರ ಮಾತನಾಡಿದ ಬೋಲ್ಟ್, 'ಮುಂದಿನ ವರ್ಷ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡುವ ಗುರಿ ಹೊಂದಿದ್ದೇನೆಎಂದರು.
ಟಾಪ್ 5
ಉಸೇನ್ ಬೋಲ್ಟ್ (ಜಮೈಕಾ)
ವಾರೆನ್ ವೇರ್ (ಜಮೈಕಾ)
ನಿಕಲ್ ಆಶ್ಮೆಡೇ (ಜಮೈಕಾ)
ವಾಲ್ಟರ್ ಡಿಕ್ಸ್ (ಅಮೆರಿಕ)
ಜಸ್ಟಿನ್ ಗ್ಯಾಟ್ಲಿನ್ (ಅಮೆರಿಕ)