ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಭೂಪತಿ- ಲಾಡ್ರಾ ಜೋಡಿ ಫೈನಲ್‌ಗೆ

Srinivasa Murthy VN
Updated On : 1 Mar 2013, 11:15 am

ದುಬೈ: ಭಾರತದ ಮಹೇಶ್ ಭೂಪತಿ ಮತ್ತು ಫ್ರಾನ್ಸ್‌ನ ಮೈಕೆಲ್ ಲಾಡ್ರಾ ಜೋಡಿ ದುಬೈ ಟೆನಿಸ್ ಚಾಂಪಿಯನ್‌ಷಿಪ್‌ನ ಫೈನಲ್ ಪ್ರವೇಶಿಸಿದೆ.
ಭಾರತ- ಫ್ರಾನ್ಸ್ ಜೋಡಿ, ಒಂದು ಗಂಟೆ 28 ನಿಮಿಷಗಳ ಕಾಲ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ರಾಜೀವ್ ರಾಮ್ ಜೋಡಿಯನ್ನು 6-4, 6-7 (2), 10-5 ಸೆಟ್‌ಗಳ ಅಂತರದಿಂದ ಪರಾಭವಗೊಳಿಸುವ ಮೂಲಕ ಫೈನಲ್‌ಗೆ ಹೆಜ್ಜೆ ಹಾಕಿತು.
ಪಂದ್ಯದ ದ್ವಿತೀಯ ಸೆಟ್‌ನ ಒಂದು ಹಂತದಲ್ಲಿ ಭೂಪತಿ ಮತ್ತು ಲಾಡ್ರಾ ಜೋಡಿ ಮೇಲುಗೈ ಸಾಧಿಸುವ ಮೂಲಕ ಜಯದ ಅಂಚಿನಲ್ಲಿತ್ತು. ಆದರೆ, ಬೋಪಣ್ಣ ಮತ್ತು ರಾಮ್ ಜೋಡಿ ತಮ್ಮ ಕಠಿಣ ಹೋರಾಟವನ್ನು ಮುಂದುವರಿಸಿ ಟೈ ಬ್ರೇಕರ್‌ನಲ್ಲಿ ಮೇಲುಗೈ ಸಾಧಿಸಿತು. ಹೀಗಾಗಿ ಪಂದ್ಯ ಮೂರನೇ ಸೆಟ್‌ಗೆ ಜಾರಿತು. ಆದರೆ, ಮೂರನೇ ಸೆಟ್‌ನಲ್ಲಿ ಭೂಪತಿ- ಲಾಡ್ರಾ ಜೋಡಿ ಜಯ ಕಾಣುವಲ್ಲಿ ಯಶಸ್ವಿಯಾಯಿತು.
ಭೂಪತಿ ಅವರಿಗೆ ಪ್ರಸಕ್ತ ಋತುವಿನಲ್ಲೇ ಇದು ಶ್ರೇಷ್ಠ ಪ್ರದರ್ಶನವಾಗಿದೆ. ಈ ಮುನ್ನ ಭೂಪತಿ ತಮ್ಮ ಜತೆಯಾಟಗಾರ ಡ್ಯಾನಿಯಲ್ ನೆಸ್ಟೋರ್ ಅವರೊಂದಿಗೆ ಚೆನ್ನೈ ಮತ್ತು ಸಿಡ್ನಿ ಓಪನ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೇ ತಮ್ಮ ಹೋರಾಟ ಅಂತ್ಯಗೊಳಿಸಿದ್ದರು. ಇನ್ನು ಆಸ್ಟ್ರೇಲಿಯಾ ಓಪನ್‌ನಲ್ಲಿ ಪ್ರಿ ಕ್ವಾರ್ಟರ್‌ಫೈನಲ್ ದಾಟಲಾಗಿರಲಿಲ್ಲ.
ಭೂಪತಿ ಮತ್ತು ಲಾಡ್ರಾ ಜೋಡಿ ಈಗ ಫೈನಲ್ ಪಂದ್ಯದಲ್ಲಿ 3ನೇ ಶ್ರೇಯಾಂಕ ಪಡೆದಿರುವ ರಾಬರ್ಟ್ ಲಿಂಡ್‌ಸೆಟ್ ಮತ್ತು ನೆನಾದ್ ಜಿಮೋಂಜಿಕ್ ಜೋಡಿಯನ್ನು ಎದುರಿಸಲಿದೆ. ಲಿಂಡ್‌ಸೆಟ್ ಮತ್ತು ಜಿಮೋಂಜಿಕ್ ಜೋಡಿ ಸೆಮಿಫೈನಲ್ ಪಂದ್ಯದಲ್ಲಿ ಮೈಕೈಲ್ ಯೋಜನಿ ಮತ್ತು ಜೋನಾಥನ್ ಎರ್ಲಿಚ್ ಜೋಡಿಯನ್ನು 7-6 (2), 7-6 (2) ಸೆಟ್‌ಗಳ ಅಂತರದಿಂದ ಪರಾಭವಗೊಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement