ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ವೀಸಾ ದೊರಕದ ಪ್ರಜಕ್ತಾ ಸಾವಂತ್ ಹೈಕೋರ್ಟ್‌ಗೆ ಮೊರೆ

Srinivasa Murthy VN
Updated On : 2 Mar 2013, 1:28 am

ಮುಂಬೈ: ಮಾ.5ರಿಂದ ಆರಂಭವಾಗಲಿರುವ ಆಲ್ ಇಂಗ್ಲೆಂಡ್ ಓಪನ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲು ಇಂಗ್ಲೆಂಡ್ ಅಧಿಕಾರಿಗಳಿಂದ ವೀಸಾ ದೊರೆಯದ ಹಿನ್ನಲೆಯಲ್ಲಿ, ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪ್ರಜಕ್ತಾ ಸಾವಂತ್ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಷನ್ (ಬಿಎಐ)ಈ ಪಂದ್ಯಾವಳಿಗೆ ಆಯ್ಕೆಯಾಗಿರುವುದಾಗಿ ಪ್ರಜಕ್ತಾ ಸಾವಂತ್‌ಗೆ ಪತ್ರ ನೀಡಿದ್ದು, ಪ್ರಜಕ್ತ ಮಾ.3ರಂದು ಪಂದ್ಯಾವಳಿಗಾಗಿ ಪ್ರಯಾಣ ಮಾಡಬೇಕಿತ್ತು. ಆದರೆ ಯುಕೆ ಅಧಿಕಾರಿಗಳು ವಿಸಾ ನೀಡಲು ನಿರಾಕರಿಸಿದ ಹಿನ್ನಲೆಯಲ್ಲಿ ಬಾಂಬೆ ಹೈಕೋರ್ಟ್ ಮಧ್ಯ ಪ್ರವೇಶಿಸಬೇಕೆಂದು ಪ್ರಜಕ್ತಾ ಮನವಿ ಮಾಡಿದ್ದರು.
ಈ ವಿಷಯದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಮೋಹಿತ್ ಶಾ ನೇತೃತ್ವದ ಪೀಠ ಈ ವೇಳೆಯಲ್ಲಿ ನ್ಯಾಯಾಲಯ ಏನೂ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಕೇಂದ್ರ ಕ್ರೀಡಾ ಸಚಿವಾಲಯ ಈ ವಿಚಾರವನ್ನು ಕೈಗೆತ್ತಿಕೊಂಡು, ಇಂಗ್ಲೆಂಡ್ ಹೈ ಕಮಿಷನ್ ಜತೆ ಚರ್ಚೆ ನಡೆಸಬೇಕೆಂದು ಸೂಚನೆ ನೀಡಿದೆ.
ಬಿಎಐ ವೆಬ್‌ಸೈಟ್‌ನಲ್ಲಿ ಪ್ರಜಕ್ತಾ ಹೆಸರು ಇಲ್ಲವೆಂಬ ಕಾರಣಕ್ಕೆ ಹೈದರಾಬಾದ್‌ನಲ್ಲಿರುವ ಯುಕೆ ಹೈ ಕಮಿಷನ್ ಅಧಿಕಾರಿಗಳು ವೀಸಾ ನೀಡಲು ನಿರಾಕರಿಸಿದರು ಎಂದು ಪ್ರಜಕ್ತಾ ತಿಳಿಸಿದ್ದು. ಇತ್ತ ಬಿಎಐ ವಕೀಲರು ತಾವು ವೀಸಾಕ್ಕೆಮನವಿ ಮಾಡುವಾಗ ಪ್ರಜಕ್ತಾ ಹೆಸರನ್ನು ಶಿಫಾರಸ್ಸು ಮಾಡಲಾಗಿತ್ತು ಎಂದು ವಾದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement