ಗಾಯಗೊಂಡ ಶಿಖರ್ ಧವನ್
ಮೊಹಾಲಿ: ಮೊಹಾಲಿ ಟೆಸ್ಟ್ನಲ್ಲಿ ಮಿಂಚಿದ್ದ ಯುವ ಆಟಗಾರ ಶಿಖರ್ ಧವನ್ ಅವರು ಗಾಯಗೊಂಡಿದ್ದಾರೆ. ಸೋಮವಾರ ನಡೆದ ದಿನದಾಟದಲ್ಲಿ ಫೀಲ್ಡಿಂಗ್ ಮಾಡುವ ವೇಳೆ, ಶಿಖರ್ ಅವರ ಕೈಗೆ ಗಾಯಗೊಂಡಿದ್ದಾರೆ.
ವೈದ್ಯಕೀಯ ಚಿಕಿತ್ಸೆಗೆ ಅವರನ್ನು ಒಳಪಡಿಸಲಾಗಿದ್ದು, ಎಕ್ಸ್ ರೇ ವರದಿಗಳ ಆಧಾರದ ಮೇಲೆ ಮೂಳೆ ಮುರಿತದಂಥ ಗಂಭೀರ ಸಮಸ್ಯೆ ಉಂಟಾಗಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಆದರೆ, ಮೂಲಗಳ ಪ್ರಕಾರ, ಶಿಖರ್ ಅವರಿಗೆ ಭಾರತದ ದ್ವಿತೀಯ ಇನಿಂಗ್ಸ್ ವೇಳೆ ಬ್ಯಾಟಿಂಗ್ ಮಾಡದಿರಲು ಸಲಹೆ ನೀಡಿದ್ದರು. ಹಾಗಾಗಿ, ಅವರು ಸೋಮವಾರ ಭಾರತದ ದ್ವಿತೀಯ ಇನಿಂಗ್ಸ್ ವೇಳೆ ಕಣಕ್ಕಿಳಿಯಲಿಲ್ಲ.