ನಾಲ್ಕನೇ ಟೆಸ್ಟ್ಗೆ ವ್ಯಾಟ್ಸನ್ ಲಭ್ಯ
ಮೊಹಾಲಿ: ಮೂರು ಸತತ ಸೋಲುಗಳಿಂದ ಕಂಗೆಟ್ಟಿರುವ ಆಸ್ಟ್ರೇಲಿಯಾ ತಂಡ, ಭಾರತ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ವಾಟ್ಸನ್ ಅವರನ್ನು ಸೇರಿಸಿಕೊಳ್ಳಲು ನಿರ್ಧರಿಸಿದೆ.
ಇತ್ತೀಚೆಗಷ್ಟೇ ಶೇನ್ ವ್ಯಾಟ್ಸನ್, ಜೇಮ್ಸ್ ಪ್ಯಾಟಿನ್ಸನ್, ಉಸ್ಮಾನ್ ಖ್ವಾಜಾ ಹಾಗೂ ಮಿಚೆಲ್ ಜಾನ್ಸನ್ ಅವರನ್ನು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವ್ಯವಸ್ಥಾಪಕ ಮಂಡಳಿ ಅಮಾನತುಗೊಳಿಸಿತ್ತು. ತಮ್ಮ ಅಮಾನತು ಆದೇಶ ಹೊರಬಿದ್ದ ಕೂಡಲೇ ಶೇನ್ ವ್ಯಾಟ್ಸನ್ ಅವರು ತಮ್ಮ ತವರೂರಾದ ಸಿಡ್ನಿಗೆ ಪ್ರಯಾಣ ಬೆಳೆಸಿದ್ದರು.
ಇದೀಗ, ಪರಿಸ್ಥಿತಿ ಬದಲಾಗಿದ್ದು, ಭಾರತ ವಿರುದ್ಧ ಸತತ ಮೂರು ಸೋಲುಗಳಿಂದ ಕಂಗೆಟ್ಟಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡ, ವ್ಯಾಟ್ಸನ್ ಅವರನ್ನು ಪುನಃ ಆಡಿಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ, ಸೋಮವಾರ ರಾತ್ರಿಯೇ ನವದೆಹಲಿಗೆ ಆಗಮಿಸಲಿರುವ ವ್ಯಾಟ್ಸನ್, ಮಂಗಳವಾರ ಬೆಳಗ್ಗೆ ಮೊಹಾಲಿಯಲ್ಲಿರುವ ತಮ್ಮ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ.